ಚೀನಾ ತನ್ನ ಆಫ್ ಗಳ ಮೂಲಕ ಭಾರತದಲ್ಲಿ ಗಳಿಸುತ್ತಿದ್ದ ಹಣ ಎಷ್ಟು ಗೊತ್ತಾ..? ಇಲ್ಲಿದೆ ನೋಡಿ..

Soma shekhar

ಭಾರತದ ಲಡಾಕ್ ನ ಗಡಿವಿಚಾರವಾಗಿ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದ ಚೀನಾದ ದುರ್ಬುದ್ದಿಯನ್ನು ಕಂಡ ಭಾರತ ತನ್ನ ದೇಶದಲ್ಲಿ ಬಹಳ ಪ್ರಖ್ಯಾತಿಯನ್ನು ಪಡೆದಿದ್ದ ಟಿಕ್ ಟ್ಯಾಕ್ ಸೇರಿದಂತೆ ಇನ್ನು ಹಲವು ಚೀನೀ ಆಫ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಾಗಿತ್ತು. ಇದರಿಂದ ದೇಶದ ಪ್ರತಿಯೊಬ್ಬ ಭಾರತೀಯನೂ ಕೂಡ ಚೀನಾ ಆಫ್ ಗಳನ್ನು ಅನ್ ಇನ್ ಸ್ಟಾಲ್ ಮಾಡಿ ದೇಶ ಪ್ರೇಮವನ್ನು ಮೆರೆದಿದ್ದರು. ಇದಾದ ನಂತರ ಗೂಗಲ್ ‍ಪ್ಲೇ ಸ್ಟೋರ್ ನಲ್ಲಿ ಚೀನಾ ಆಫ್ ಗಳು ಕಣ್ಮರೆಯಾದವು. ಇದರಿಂದ ಚೀನಾಕ್ಕೆ ಆದಾಯದ ಒಂದು ರೆಕ್ಕೆಯನ್ನು ಕತ್ತರಿಸಿಕೊಂಡಂತಾಗಿದೆ ಅಷ್ಟಕ್ಕೂ ಚೀನಾ ಆಯಪ್​ಗಳು ಭಾರತದಿಂದ ಗಳಿಕೆ ಮಾಡುತ್ತಿದ್ದ ಹಣ ಎಷ್ಟು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

 

ಯುಸಿ ಬ್ರೌಸರ್​: ಜಾಕ್​ ಮಾ ಒಡೆತನದ ಅಲಿಬಾಬಾ ಕಂಪನಿಯ ಯುಸಿ ಮೊಬೈಲ್​ ವೆಬ್​ ಪ್ರೈವೇಟ್​ ಲಿಮಿಟೆಡ್​ ಕಂಪನಿ ಯುಸು ಬ್ರೌಸರ್​ ಹಾಗೂ ಯುಸಿ ನ್ಯೂಸ್​ ಆಯಪ್​ಗಳನ್ನು ಹೊರತಂದಿದೆ. ಭಾರತದ ಸ್ಮಾರ್ಟ್​ ಫೋನ್​ಗಳಲ್ಲಿ ಶೇ.22 ಈ ಬ್ರೌಸರ್ ಬಳಸಲಾಗುತ್ತಿತ್ತು. ಭಾರತದಲ್ಲಿ ಕೇವಲ ನೂರು ಸಿಬ್ಬಂದಿ ಹೊಂದಿದ್ದ ಈ ಕಂಪನಿ 2018-19 ರಲ್ಲಿ 226.64 ಕೋಟಿ ರೂ. ಸಂಪಾದನೆ ಮಾಡಿತ್ತು.

 

ಟಿಕ್ಟಾಕ್​, ಹಲೋ: ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದ ಟಿಕ್​ ಟಾಕ್ ಹಾಗೂ ಹಲೋ ಆಯಪ್​ ಒಟ್ಟಾರೆ 17 ಕೋಟಿ ಬಳಕೆದಾರರನ್ನು ಹೊಂದಿತ್ತು. ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಆಯಪ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 2018-19ರಲ್ಲಿ 43.6 ಕೋಟಿ ರೂ.ಗಳನ್ನು ಗಳಿಸಿತ್ತು.

ಶೇರ್ಇಟ್​: ಚೀನಾದ ಶೇರ್​ ಇಟ್​ ಆಯಪ್​ಗೂ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿತ್ತು . ಇದಕ್ಕೆ 40 ಕೋಟಿ ಬಳಕೆದಾರರಿದ್ದರು. ಆದರೆ, ಗಳಿಸಿದ ಆದಾಯ 14.73 ಕೋಟಿ ರೂ. ಭಾರತದ ಶೇರ್​ ಇಟ್​ ಕಂಪನಿ ಹಾಂಗ್​ಕಾಂಗ್​ ಸಂಸ್ಥೆಯ ಒಡೆತನದಲ್ಲಿತ್ತು.

 

ಇ-ಮಾರ್ಕೆಟ್​ ತಾಣ ಕ್ಲಬ್​ ಫ್ಯಾಕ್ಟರಿ 3,000ಕ್ಕೂ ಅಧಿಕ ವರ್ತಕರನ್ನು ನೋಂದಾಯಿಸಿಕೊಂಡಿತ್ತು. ಇದರ ಮಾತೃ ಸಂಸ್ಥೆಯಾದ ಗ್ಲೋಬ್​ ಮ್ಯಾಕ್ಸ್​ ಕಾಮರ್ಸ್​ ಇಂಡಿಯಾ ಕಂಪನಿ ಕಳೆದ ಸಾಲಿನಲ್ಲಿ 172.14 ಕೋಟಿ ಆದಾಯ ಗಳಿಸಿತ್ತು. ಇದಲ್ಲದೇ. ಕ್ಯಾಮ್​ಸ್ಕ್ಯಾನರ್​ ಕಂಪನಿ 10 ಕೋಟಿ ಸಕ್ರಿಯ ಬಳಕೆದಾರರನ್ನು ಭಾರತದಲ್ಲಿ ಹೊಂದಿತ್ತು.

 

Find Out More:

Related Articles: