ಇನ್ನು ಮುಂದೆ ವಾಟ್ಸಾಪ್ ಮತ್ತು ಫೇಸ್ ಬುಕ್ ಮೆಸೆಂಜರ್ ನಡುವೆ ನೇರ ಸಂವಹನ ..!! ಅಷ್ಟಕ್ಕೂ ಅದು ಹೇಗೆ ಸಾಧ್ಯ?

Soma shekhar

ಫೇಸ್ ಬುಕ್ ಇದು ಇದು ಒಂದು ಜನಪ್ರಿಯ ಸಂವಹನಮಾಧ್ಯಮವಾಗಿ ಇಡೀ ಜಗತ್ತನ್ನೇ ಒಗ್ಗೂಡಿಸಿರುವಂತಹ ಒಂದು ತಂತ್ರಾಂಶವಾಗಿದೆ  ಈ ತಂತ್ರಾಂಶದ ಮೂಲಕ ಜಗತ್ತಿನಲ್ಲಿರುವ ಅಪರಿಚಿತ ವ್ಯಕ್ತಗಳನ್ನು ಪರಿಚಿತ ವ್ಯಕ್ತಿಗಳನ್ನಾಗಿ ಮಾಡುವಂತಹ ಒಂದು ಉತ್ತಮ  ತಂತ್ರಾಂಶ, ಅದೇ ರೀತಿ ವಾಟ್ಸಾಪ್ ಕೂಡ ಅತೀ ವೇಗವಾಗಿ ಚಾಟ್ ಮಾಡಬಹುದಾದ ಸಂವಹನ ಸಾಧನವಾಗಿದೆ. ಈ ವಾಟ್ಸಾಪ್ ಮತ್ತು ಫೇಸ್ ಬುಕ್  ಮೆಸೆಂಜರ್ ಆಪ್ ನ ಮಾಲೀಕತ್ವವನ್ನು ಒಬ್ಬರೇ ಹೊಂದಿರುವುದರಿಂದ ಇವೆರಡ ಮಧ್ಯೆ ಸಂವಹನವನ್ನು ನಡೆಸಲು ಅವಕಾಶವನ್ನು ಮಾಡಲಾಗುವುದು ಎಂದು ಹೇಳಲಾಗುತ್ತಿದೆ.  

 

 ಹೌದು ಫೇಸ್‌ಬುಕ್ ಶೀಘ್ರದಲ್ಲೇ ಫೇಸ್‌ಬುಕ್ ಮೆಸೆಂಜರ್ ಮತ್ತು ವಾಟ್ಸಾಪ್ ನಡುವಿನ ಸಂವಹನವನ್ನು ಸಕ್ರಿಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಒಂದು ವೇಳೆ ಎಲ್ಲವೂ ಅಂದುಕೊಂಡತೇ ಆದರೆ ಈ ಮೂಲಕ ಎರಡು ಆಪ್‌ಗಳ ಮೂಲಕ ಸುಲಭವಾಗಿ ಸಂವಹನ ನಡೆಸಬಹುದಾಗಿದೆ.

 

 ಇದರರ್ಥ ಫೇಸ್‌ಬುಕ್ ಮೆಸೆಂಜರ್‌ಗೆ ವಾಟ್ಸಾಪ್‌ನೊಂದಿಗೆ ಸಂವಹನ ನಡೆಸಲು ಸಾಧ್ಯವಿದೆ. ಫೇಸ್‌ಬುಕ್ ಬಳಕೆದಾರರ ಸಂದೇಶಗಳನ್ನು ವಾಟ್ಸಾಪ್‌ನಲ್ಲಿ ಸಂಗ್ರಹಿಸುತ್ತಿಲ್ಲ ಆದರೆ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲು ಮತ್ತು ಡೀಕ್ರಿಪ್ಟ್ ಮಾಡಲು ಸಿಗ್ನಲ್ ಪ್ರೋಟೋಕಾಲ್ ಅನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಎರಡೂ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ವಾಟ್ಸಾಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ಗೆ ಹೆಚ್ಚುವರಿಯಾಗಿ (ಜಾಹೀರಾತು-ಮುಕ್ತ ಅನುಭವದ ಜೊತೆಗೆ) ಸಾಧನದಲ್ಲಿ ಚಾಟ್ ಮಾಹಿತಿಯನ್ನು ಸಂಗ್ರಹಿಸುತ್ತದೆ. ಇದಕ್ಕಾಗಿಯೇ ವಾಟ್ಸಾಪ್ ಅನ್ನು ಒಂದೇ ಸಾಧನದಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ ಎನ್ನಲಾಗಿದೆ

 

WAbetainfo ಪ್ರಕಾರ, ಫೇಸ್‌ಬುಕ್ ಮೆಸೆಂಜರ್ ಮತ್ತು ವಾಟ್ಸಾಪ್ ನಡುವೆ ಸಂವಹನಗಳನ್ನು ಸಾಧ್ಯವಾಗಿಸುವ ಕೆಲಸ ಮಾಡುತ್ತಿದ್ದು, ಇದರರ್ಥ ಫೇಸ್‌ಬುಕ್ ಮೆಸೆಂಜರ್‌ಗೆ ವಾಟ್ಸಾಪ್‌ನೊಂದಿಗೆ ಸಂವಹನ ನಡೆಸಲು ಸುಲಭವಾಗುವ ನಿಟ್ಟಿನಲ್ಲಿ ತನ್ನ ಬಳಕೆದಾರರಿಗೆ ಅವಕಾಶ ಕಲ್ಪಿಸಿಕೊಡಲಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ, ಇತರ ವಾಟ್ಸಾಪ್ ಬಳಕೆದಾರರೊಂದಿಗೆ ಸಂದೇಶಗಳು ಮತ್ತು ಸೇವೆಗಳನ್ನು ನಿರ್ವಹಿಸುವ ಸಲುವಾಗಿ ಫೇಸ್‌ಬುಕ್ ಸ್ಥಳೀಯ ಡೇಟಾಬೇಸ್‌ನಲ್ಲಿ ಕೆಲವು ಕೋಷ್ಟಕಗಳನ್ನು ರಚಿಸುತ್ತಿದೆ, "ಎಂದು WAbetainfo ವರದಿ ಹೇಳಿದೆ.

 

 ವಾಟ್ಸ್‌ಆಯಪ್‌ನಲ್ಲಿ ಫೇಸ್‌ಬುಕ್ ಬಳಕೆದಾರರ ಸಂದೇಶಗಳನ್ನು ಸಂಗ್ರಹಿಸುತ್ತಿಲ್ಲ ಆದರೆ ಅದು ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲು ಮತ್ತು ಡೀಕ್ರಿಪ್ಟ್ ಮಾಡಲು ಸಿಗ್ನಲ್ ಪ್ರೋಟೋಕಾಲ್ ಅನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಇದೇ ವೇಳೆ ವರದಿಯಲ್ಲಿ ಹೇಳಲಾಗಿದೆ, ಫೇಸ್‌ಬುಕ್ ಮೆಸೆಂಜರ್‌ನ ಒಂದು ಲಕ್ಷಣವೆಂದರೆ ನೀವು ಏಕಕಾಲದಲ್ಲಿ ಅನೇಕ ಸಾಧನಗಳಿಂದ ಚಾಟ್‌ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದಾಗಿದೆ. ಗಮನಿಸಬೇಕಾದ ಅಂಶವೆಂದರೆ, ಈ ವೈಶಿಷ್ಟ್ಯವು ಅಭಿವೃದ್ಧಿಯ ಹಂತದಲ್ಲಿದ್ದು, ಒಂದು ವೇಳೆ ಇದು ಬಳಕೆದಾರರಿಗೆ ಲಭ್ಯವಾಗುವ ಮುನ್ನವೇ ಇದು ಲಭ್ಯವಾಗದೇ ಕೊನೆಗೊಳ್ಳಲು ಬಹುದು ಎನ್ನಲಾಗಿದೆ.

 

Find Out More:

Related Articles: