ಗೂಗಲ್ ಪ್ಲೇ ಸ್ಟೋರ್ ಇಂದ ರಿಮೂವ್ ಚೀನಾ ಆಪ್ ನನ್ನು ತೆಗೆದು ಹಾಕಲು ಕಾರಣವೇನು..? ಇಲ್ಲಿದೆ ಉತ್ತರ

Soma shekhar

ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯ ಗೊಂಡಿದ್ದ ರಿಮೂವ್ ಚೀನಾ ಆಫ್ ಮೊಬೈಲ್ ನಲ್ಲಿರುವ ಚೀನಾ ಮೂಲದ  ಆಫ್ ಗಳನ್ನು ಗುರುತಿಸಿ  ಅದನ್ನು ಡಿಲೀಟ್ ಮಾಡುತ್ತಿತ್ತು.  ಭಾರತವನ್ನು ಸ್ವಾವಲಂಬಿ ದೇಶವನ್ನಾಗಿ ಮಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಹಾಗೂ ಚೀನಾ ದೇಶದ ವಸ್ತುಗಳ್ನು ಬಹಿಷ್ಕರಿಸುವಂತಹ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿದೆ. ಆದರೆ ಇದಕ್ಕೆ ಪೂರಕವೆಂಬಂತೆ ಬಂದ ರಿಮೂವ್ ಚೀನಾ ಆಫ್ ಬಹಳ ಸಹಕಾರಿಯಾಗಿತ್ತು, ಈ ಮೂಲಕ ನಾವು ಉಪಯೋಗಿಸುತ್ತಿರುವ ಚೀನಾ ಮೂಲದ ಆಫ್ ಗಳನ್ನು ಗಳನ್ನು ಗುರುತಿಸಿ ಮಾಲೀಕ ಆಜ್ಞೆಯ ಮೇರೆಗೆ ಆ ಚೀನಾ ಆಫ್ ಗಳನ್ನು ಡಿಲೀಡ್ ಮಾಡಲಾಗುತ್ತಿತ್ತು. ಈ ಒಂದು ಆಫ್ ಗೂಗಲ್ ‍ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಡೌನ್ ಲೋಡ್ ಮಾಡಲಾಗುತ್ತಿತ್ತು ಆದರೆ ಈಗ ಚೀನಾ ರಿಮೂವ್ ಆಫ್ ಗೂಗಲ್ ಪ್ಲೇ ಸ್ಟೋರ್ ಇಂದ ತೆಗೆದು ಹಾಕಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.. ಅಷ್ಟಕ್ಕೂ ಚೀನಾ ರಿಮೂವ್ ಆಯ್ಯ ಡಿಲೇಟ್ ಆಗಲು ಕಾರಣ  ಏನು ಗೊತ್ತಾ

 

ಗೂಗಲ್ ಪ್ಲೇ ಸ್ಟೋರ್‌ನಿಂದ ಚೀನಾ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ ಹಾಕುವ 'Remove china apps' ಅನ್ನು ತೆಗೆದುಹಾಕಲಾಗಿದೆ. ಈ ಹಿಂದೆ ಟಿಕ್‌ಟ್ಯಾಕ್ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಮಿಟ್ರಾನ್ ಅಪ್ಲಿಕೇಶನ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಇದೀಗ ಅದರ ಜೊತೆಗೆ 'Remove china apps' ಕೂಡ ಬಳಕೆದಾರರಿಗೆ ಸಿಗುತ್ತಿಲ್ಲ.

 

ನಿಮ್ಮ ಮೊಬೈಲ್‌ನಲ್ಲಿ ಚೀನಾ ಅಪ್ಲಿಕೇಶನ್‌ಗಳನ್ನು ಗುರುತಿಸಿ ಡಿಲೀಟ್ ಮಾಡಲು ಅನುಮತಿ ಕೇಳುತ್ತಿದ್ದ 'Remove china apps' ಅನ್ನು ಏಕೆ ತೆಗೆದುಹಾಕಲಾಗಿದೆ ಅಥವಾ ಅದು ಮತ್ತೆ ಲಭ್ಯವಾಗುತ್ತದೆಯೋ ಇಲ್ಲವೋ ಎಂಬುದನ್ನು ಟೆಕ್ ದೈತ್ಯ ದೃಢಪಡಿಸಿಲ್ಲ.

 

ಅಪ್ಲಿಕೇಶನ್‌ನ ಡೆವಲಪರ್ ಜೈಪುರ ಮೂಲದ OneTouchAppLabs ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ನಲ್ಲಿ ಘೋಷಿಸಿದೆ. ಆದರೆ ಅಪ್ಲಿಕೇಶನ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ಸಂಸ್ಥೆಯು ಖಚಿತಪಡಿಸಿಲ್ಲ.

 

ಪ್ಲೇ ಸ್ಟೋರ್‌ ನಿಯಮ ಉಲ್ಲಂಘಿಸಿದರೆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ

ಗೂಗಲ್ ಪ್ಲೇ ಸ್ಟೋರ್‌ ಸಾಮಾನ್ಯವಾಗಿ ತನ್ನ ನೀತಿಗಳನ್ನು ಉಲ್ಲಂಘಿಸುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ. ಈ ಹಿಂದೆ ಟಿಕ್‌ಟಾಕ್‌ ಪ್ರತಿಸ್ಫರ್ಧಿಯಾಗಿ ಹುಟ್ಟಿಕೊಂಡಿದ್ದ ಮಿಟ್ರಾನ್‌ ಆಯಪ್‌ಗೂ ಇದೇ ಆಯಿತು. ಸಿಎನ್‌ಬಿಸಿಟಿವಿ 18 ವರದಿಯು ಟೆಕ್ ದೈತ್ಯ ಅಪ್ಲಿಕೇಶನ್ ಅನ್ನು ರೆಡ್ ಫ್ಲ್ಯಾಗ್ ಮಾಡಿದೆ ಮತ್ತು ಅದರ ಸ್ಪ್ಯಾಮ್ ಮತ್ತು ಕನಿಷ್ಠ ಕ್ರಿಯಾತ್ಮಕತೆ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ಅಮಾನತುಗೊಳಿಸಲು ನಿರ್ಧರಿಸಿದೆ.

 

ಏನಿದು 'Remove china apps'

 

ಹೆಸರೇ ಸೂಚಿಸುವಂತೆ, ಚೀನಾ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದೇ ಇದರ ಕೆಲಸ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದ ಈ ಅಪ್ಲಿಕೇಶನ್ ಹೆಸರು "Remove China Apps". ಮೇ 17 ರಂದು ಬಿಡುಗಡೆಯಾಗಿರುವ ಈ ಆಯಪ್ ಗೂಗಲ್ ಪ್ಲೇ ಸ್ಟೋರ್ ನ ಟಾಪ್ ಫ್ರೀ ಆಯಪ್‌ಗಳ ಪಟ್ಟಿಗೆ ಸೇರಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆಯಪ್ 1 ಮಿಲಿಯನ್ ಅಂದರೆ 10 ಲಕ್ಷ ಬಳಕೆದಾರರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿತ್ತು.

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಒಮ್ಮೆ ಸ್ಕ್ಯಾನ್ ಬಟನ್ ಅನ್ನು ಕ್ಲಿಕ್ಕಿಸಬೇಕಿತ್ತು. ನಂತರ ಈ ಆಯಪ್ ನಿಮ್ಮ ಮೊಬೈಲ್ ಅನ್ನು ಸ್ಕ್ಯಾನ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಯಾವ ಯಾವ ಚೈನೀಸ್ ಆಯಪ್‌ಳಿವೆ ಎಂಬುದನ್ನು ನಿಮಗೆ ತಿಳಿಸಲಿದೆ. ಒಂದು ವೇಳೆ ಆ ಎಲ್ಲ ಆಯಪ್‌ಗಳನ್ನು ಡಿಲೀಟ್ ಮಾಡಲು ನೀವು ಅನುಮತಿ ನೀಡಿದರೆ, ಅದು ನಿಮ್ಮ ಮೊಬೈಲ್ ನಿಂದ ಎಲ್ಲಾ ಚೈನೀಸ್ ಆಪ್ ಗಳನ್ನು ತೆಗೆದುಹಾಕಲಿದೆ. ಹೀಗಾಗಿ ಪ್ಲೇ ಸ್ಟೋರ್ ನಲ್ಲಿ 4.8 ಬಳಕೆದಾರರ ರೇಟಿಂಗ್ ಪಡೆದಿತ್ತು.

 

ಆದರೆ ಈ ಆಯಪ್ ಸದ್ಯ ತನ್ನ ನೀತಿಗಳನ್ನು ಉಲ್ಲಂಘಿಸಿದೆ ಎಂದು ಗೂಗಲ್ ಪ್ಲೇ ಸ್ಟೋರ್ ತೆಗೆದುಹಾಕಿದೆ. ಆದರೆ ಈಗಾಗಲೇ ಡೌನ್‌ಲೋಡ್ ಮಾಡಿಕೊಂಡಿರುವವರಿಗೆ ಈ ಆಯಪ್‌ ಕಾರ್ಯ ನಿರ್ವಹಿಸಲಿದೆ.

 

Find Out More:

Related Articles: