7 ವರ್ಷದ ಮಗುವಿನ ಮೇಲೆ ಕ್ರಿಕೆಟಿಗ ಪ್ರವೀಣ್ ಹಲ್ಲೆ. ಏನಾಯ್ತು ಗೊತ್ತಾ?

Soma shekhar
   
ಮೀರತ್: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಅವರು ತನ್ನ 7 ವರ್ಷದ ಮಗನನ್ನು ಹೊಡೆದು ತಳ್ಳಿದ್ದಾರೆ ಎಂದು ಉತ್ತರ ಪ್ರದೇಶದ ಮೀರತ್ ನ ನಿವಾಸಿ ದಿನೇಶ್ ಶರ್ಮಾ ಅವರು ಈ ರೀತಿಯಾಗಿ ಆರೋಪಿಸಿದ್ದಾರೆ. ಹೌದು, ಒಂದು ಕಾಲದಲ್ಲಿ ಟೀಂ ಇಂಡಿಯಾದ ಅದ್ಭುತ ಆಟಗಾರ ಪ್ರವೀಣ್ ಕುಮಾರ್. ಆದರೆ ಇದೀಗ ಏನಾಯ್ತು! ಯಾಕೆ ಈ ರೀತಿ ಮಾಡಿದ್ದಾರೆ ಗೊತ್ತಾ! 
 
 ಮಧ್ಯಾಹ್ನ 3ಗಂಟೆಗೆ ಬಸ್ ನಿಲ್ದಾಣದಲ್ಲಿ ನನ್ನ ಮಗನಿಗಾಗಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಪ್ರವೀಣ್​ಕುಮಾರ್ ಸ್ಥಳಕ್ಕೆ ಬಂದು, ತನ್ನ ಕಾರಿನಿಂದ ಹೊರಬಂದು ಮೊದಲು ಬಸ್ ಚಾಲಕನನ್ನು ನಿಂದಿಸಿ ನಂತರ ನನ್ನನ್ನು ನಿಂದಿಸಿದನು. ನಂತರ ಅವರು ನನ್ನನ್ನು ಹೊಡೆದು ಕೈ ಮುರಿದರು. ಇದೇ ವೇಳೆಯಲ್ಲಿ ಕುಮಾರ್​ ಅವರು ಮಧ್ಯಪಾನ ಮಾಡಿದ ಸ್ಥಿತಿಯಲ್ಲಿ ಇದ್ದರು ಎಂದು ಸಂತ್ರಸ್ತ ಅಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಇನ್ನು ನಾನು ಗಾಯಗೊಂಡ ಬೆನ್ನೆಲೆಯಲ್ಲಿ ನನ್ನ ಮಗನನ್ನು ಸಹ ತಳ್ಳಿದರು. ಈಗ ಪೊಲೀಸರು ನನ್ನನ್ನು ರಾಜಿ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ, ನನಗೆ ಬೆದರಿಕೆಯ ಕರೆಗಳು ಕೂಡ ಬರುತ್ತಿವೆ ಎಂದರು. ಅಲ್ಲದೇ, ಈ ಪ್ರಕರಣವು ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಸಂಬಂಧಿಸಿರುವುದರಿಂದ ಪೊಲೀಸರು ತಮ್ಮ ದೂರನ್ನು ದಾಖಲಿಸಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತ ದೀಪಕ್ ಶರ್ಮಾ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ. 
 
ಅಲ್ಲಿನ ಎಸ್​ಪಿಯಾದ ಅಖಿಲೇಶ್ ನಾರಾಯಣ್ ಪ್ರತಿಕ್ರಿಯಿಸಿದ್ದು, ಇಬ್ಬರೂ ನೆರೆಹೊರೆಯವರು. ನಾವು ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ವೈದ್ಯಕೀಯವಾಗಿ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಪ್ರವೀಣ್ ಕುಮಾರ್​, 2007 ರಲ್ಲಿ ಜೈಪುರದಲ್ಲಿ ಪಾಕಿಸ್ತಾನ ವಿರುದ್ಧದ 5 ನೇ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲದೇ, ಕ್ರಿಕೆಟಿಗ ಎಂಎಸ್. ಧೋನಿ ಅವರ ನಾಯಕತ್ವದಲ್ಲಿ ಸೀಮಿತ ಓವರ್ ಕ್ರಿಕೆಟ್​ನಲ್ಲಿ ಭಾರತದ ಪರ ಪ್ರಧಾನ ಸ್ವಿಂಗ್ ಬೌಲರ್ಗಳಲ್ಲಿ ಪ್ರಮುಖ ಬೌಲರ್ ಆಗಿದ್ದರು.

Find Out More:

Related Articles: