ಐಪಿಎಲ್ ಹರಾಜಿನಲ್ಲಿ ರಾಬಿನ್ ಉತ್ತಪ್ಪ ಏನಾದ್ರು?

Soma shekhar
ಬೆಂಗಳೂರು: ಮನೆ ಮನೆಯಲ್ಲೂ ಮನರಂಜನೆಯ ಹಬ್ಬ ನೀಡುವ ಐಪಿಎಲ್ 2020 ಹರಾಜಿಗೆ ಕ್ಷಣಗಣನೆ ಶುರುವಾಗಿದ್ದು,  ಕೋಲ್ಕತ್ತಾ ತಂಡದಿಂದ ರಾಬಿನ್ ಉತ್ತಪ್ಪ ಅವರನ್ನು ಕೈಬಿಡಲು ದೀರ್ಘ ಚಿಂತನೆ ನಡೆಸಲಾಗಿದೆ. ಐಪಿಎಲ್ 2020 ಹರಾಜು ಪ್ರಕ್ರಿಯೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗರಿಷ್ಠ 12 ಆಟಗಾರರನ್ನು ಬಿಟ್ಟಿದ್ದರೆ, ಸನ್​ರೈಸರ್ಸ್ ಹೈದರಾಬಾದ್ ತಂಡ ಕನಿಷ್ಠ 5 ಆಟಗಾರರನ್ನು ಬಿಟ್ಟುಕೊಟ್ಟಿದೆ.
 
ಆರ್​ಸಿಬಿ ತಂಡ ಕೇವಲ ಎರಡು ವಿದೇಶಿ ಆಟಗಾರನ್ನು ಮಾತ್ರವೇ ತಂಡದಲ್ಲಿ ಉಳಿಸಿಕೊಂಡಿದೆ. ನಿವೃತ್ತಿ ಹೊಂದಿರುವ ಯುವರಾಜ್ ಸಿಂಗ್​ಗೆ ಮುಂಬೈ ಇಂಡಿಯನ್ಸ್ ಕೊಕ್ ನೀಡಿದೆ. ಡಿಸೆಂಬರ್ 19ರಂದು ಕೋಲ್ಕತದಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಆರ್​ಸಿಬಿ ಬಹುತೇಕ ವಿದೇಶಿ ಆಟಗಾರರಿಗೆ ಬಿಡ್ ಮಾಡುವ ಸಾಧ್ಯತೆ ಅಧಿಕವಾಗಿದೆ. ತಂಡದಲ್ಲಿ ಇನ್ನೂ 6 ವಿದೇಶಿ ಆಟಗಾರರನ್ನು ಆರ್​ಸಿಬಿ ಸೇರಿಸಿಕೊಳ್ಳಲು ಅವಕಾಶವಿದ್ದು, 6 ದೇಶೀಯ ಕ್ರಿಕೆಟಿಗರಿಗೆ ಅವಕಾಶವಿದೆ.
 
ಆರ್​ಸಿಬಿ ಹೊರತಾಗಿ ಹರಾಜಿನಲ್ಲಿ ಗಮನಸೆಳೆಯುವ ಇನ್ನೊಂದು ತಂಡವಿದ್ದರೆ, ಅದು ಕಿಂಗ್ಸ್ ಇಲೆವೆನ್ ಪಂಜಾಬ್. ಕೇವಲ 7 ಆಟಗಾರರನ್ನು ಬಿಡುಗಡೆ ಮಾಡಿರುವ ಪಂಜಾಜ್​ಗೆ ಹರಾಜಿನಲ್ಲಿ ಇರುವ ಉಳಿದೆಲ್ಲ ತಂಡಕ್ಕಿಂತ ಹೆಚ್ಚಿನ ಹಣ ಹೊಂದಿದೆ. ತಂಡದ ಕ್ರಿಕೆಟ್ ನಿರ್ದೇಶಕ ಹುದ್ದೆಯಲ್ಲಿರುವ ಅನಿಲ್ ಕುಂಬ್ಳೆ ಆಯ್ಕೆ ಈ ಬಾರಿ ಎಷ್ಟು ಭಿನ್ನವಾಗಿರಲಿದೆ ಎನ್ನುವುದು ತಿಳಿಯಲಿದೆ. 
 
4 ಬಾರಿ ಚಾಂಪಿಯನ್ ಆದ ಮುಂಬೈ, 3 ಬಾರಿ ಚಾಂಪಿಯನ್ ಆದ ಚೆನ್ನೈ ತಂಡಗಳನ್ನು ಹೆಚ್ಚಿನ ಆಟಗಾರರನ್ನು ಬಿಟ್ಟುಕೊಡದೆ ಮೂಲ ತಂಡವನ್ನು ಹಾಗೆ ಉಳಿಸಿಕೊಂಡಿವೆ. ಈ ಮೂರು ತಂಡಗಳು 20 ಕೋಟಿ ರೂ.ಗಿಂತ ಕಡಿಮೆ ಹಣವನ್ನು ಹರಾಜಿಗೆ ಹೊಂದಿದ್ದರೆ, ಮುಂಬೈ ತಂಡ ಇರುವ ಎಲ್ಲ ಫ್ರಾಂಚೈಸಿಗಳಿಗಿಂತ ಕನಿಷ್ಠ 13.05 ಕೋಟಿ ರೂ. ಮೊತ್ತವನ್ನು ಹೊಂದಿದೆ. ರಾಜಸ್ಥಾನ ರಾಯಲ್ಸ್ ತಂಡ ಮುಂದಿನ ಆವೃತ್ತಿಯ ನಾಯಕತ್ವವನ್ನು ಸ್ಟೀವನ್ ಸ್ಮಿತ್​ಗೆ ನೀಡಿದ್ದರೆ, 11 ಆಟಗಾರರನ್ನು ಬಿಡುಗಡೆ ಮಾಡಿದೆ. ಕೋಲ್ಕತ ನೈಟ್​ರೈಡರ್ಸ್ ಕೂಡ ತಂಡದ ಅಗ್ರ ಆಟಗಾರರಾಗಿರುವ ರಾಬಿನ್ ಉತ್ತಪ್ಪ ಹಾಗೂ ಕ್ರಿಸ್ ಲ್ಯಾನ್ ಸೇರಿದಂತೆ 11 ಆಟಗಾರರನ್ನು ಹರಾಜಿನಲ್ಲಿಟ್ಟಿದೆ. ಪ್ರಸ್ತುತ ಹರಾಜು ಭಾರೀ ಕುತೂಹಲ ಮೂಡಿಸಿದೆ.

Find Out More:

Related Articles: