ಎನ್‌.ಸಿ.ಎದಲ್ಲಿ 'ಗಬ್ಬರ್‌ ಸಿಂಗ್' ದರ್ಭಾರ್, ಸ್ಟೆಪ್‌ ಹಾಕಿದ ಹಾರ್ದಿಕ್‌, ಇಶಾಂತ್‌ ಶರ್ಮಾ

Soma shekhar
ಬೆಂಗಳೂರು: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರಲ್ಲಿ ಬಹುತೇಕರು ಗಾಯಗೊಂಡಿದ್ದು, ಚೇತರಿಕೆ ಸಲುವಾಗಿ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌.ಸಿ.ಎ)ಯಲ್ಲಿ ಪುನರ್‌ ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಹೌದು, ಫಿಟ್ ನೆಸ್ ಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶ್ರಮದ ಜೊತೆ ಇದೀಗ ಮನರಂಜನೆಯನ್ನು ಸೇರಿಸಿದ್ದಾರೆ. 
 
ನಾನಾ ಗಾಯದ ಸಮಸ್ಯೆಗಳ ಕಾರಣ ಭಾರತ ತಂಡದ ಪ್ರಮುಖ ಬ್ಯಾಟ್ಸ್ ಮ್ಯಾನ್ ಶಿಖರ್‌ ಧವನ್‌, ಹಾರ್ದಿಕ್‌ ಪಾಂಡ್ಯ, ಬೌಲರ್ ಇಶಾಂತ್‌ ಶರ್ಮಾ ಹಾಗೂ ಭುವನೇಶ್ವರ್‌ ಕುಮಾರ್‌ ಸದ್ಯ ಎನ್‌. ಸಿ.ಎದಲ್ಲಿ ವಿವಿದ ಕಸರತ್ತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೊಟ್ಟಿಗೆ ಶೀಘ್ರದಲ್ಲೇ ರೋಹಿತ್‌ ಶರ್ಮಾ ಕೂಡ ಸೇರಿಕೊಳ್ಳಲಿದ್ದಾರೆ. ಅಂದಹಾಗೆ ಸ್ಟಾರ್‌ ಓಪನರ್‌ ಶಿಖರ್‌ ಧವನ್‌ ಎಲ್ಲಿರುತ್ತಾರೋ ಅಲ್ಲಿ ಮೋಜು ಮಸ್ತಿಗೇನು ಕೊರತೆಯಿಲ್ಲ. ಸದಾ ಲವಲವಿಕೆಯಿಂದ ಕಾಲ ಕಳೆಯುವ 'ಗಬ್ಬರ್‌' ಖ್ಯಾತಿಯ ಎಡಗೈ ಬ್ಯಾಟ್ಸ್‌ ಮನ್‌ ಜೊತೆಗಾರರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತಿರುವುದು ನೋಡಿದ್ದೇವೆ. ಇದೀಗಲು ಸಹ ಮನರಂಜನೆಯಲ್ಲಿ ತೊಡಗಿದ್ದಾರೆ. 
 
ಇದೀಗ ಎನ್‌.ಸಿ.ಎಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ವೇಳೆ ಹಾರ್ದಿಕ್‌ ಪಾಂಡ್ಯಮತ್ತು ಇಶಾಂತ್‌ ಶರ್ಮಾ ಹಾಡೊಂದಕ್ಕೆ ಸ್ಟೆಪ್‌ ಹಾಕುವಂತೆ ಧವನ್‌ ಪ್ರೇರೇಪಿಸುತ್ತಿರುವ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.ಇದಕ್ಕೆ ಒಂದೊಳ್ಳೆ ತಲೆ ಬರಹವನ್ನೂ ಧವನ್‌ ನೀಡಿದ್ದಾರೆ. 
 
"ರಿಹ್ಯಾಬ್‌ ಬೋರಿಂಗ್‌ ಎಂದು ಹೇಳಿದವರು ಯಾರು? ಇಲ್ಲಿ ನಾವೇ ರಾಜರು(ಯಹಾನ್‌ ಕೆ ಹಮ್‌ ಸಿಕಂದರ್‌)," ಎಂದು ಎನ್‌.ಸಿ.ಎ ಜಿಮ್‌ ನಲ್ಲಿ ಡಾನ್ಸ್‌ ಮಾಡುತ್ತಾ ವರ್ಕ್‌ ಔಟ್‌ ಮಾಡಿ ಮಸ್ತಿಯಲ್ಲಿರುವ ವಿಡಿಯೋವನ್ನು ಧವನ್‌ ಶೇರ್‌ ಮಾಡಿದ್ದಾರೆ. ಅಂದಹಾಗೆ ಧವನ್ ಅವರ ಡಾನ್ಸ್‌ ಧಮಾಕ ಎನ್‌.ಸಿ.ಎದಲ್ಲಿ ಇದು ಮೊದಲೇನಲ್ಲ. ಕಳೆದ ವರ್ಷ ಗಾಯದ ಸಮಸ್ಯೆ ಕಾರಣ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗಳಿಂದ ಹೊರಗುಳಿದಿದ್ದ ಶಿಖರ್‌, ಎನ್‌. ಸಿ.ಎ ಜಿಮ್‌ ನಲ್ಲಿ 'ಲ್ಯಾಂಬೋರ್ಗಿನಿ' ಪಂಜಾಬಿಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ್ದ ವಿಡಿಯೋ ಹಂಚಿಕೊಂಡಿದ್ದರು.ಇದೀಗ ಹೊಸ ವಿಡಿಯೋಗೆ ಕಾಮೆಂಟ್‌ ಮಾಡಿರುವ ಟೀಮ್ ಇಂಡಿಯಾದ ವೇಗಿ ಖಲೀಲ್‌ ಅಹ್ಮದ್‌, "ನಿಮ್ಮ ಗುಂಪಿಗೆ ಇನ್ನೊಬ್ಬರ ಸೇರ್ಪಡೆಯಾಗಲಿದೆ," ಎಂದು ಹೇಳಿ ರೋಹಿತ್‌ ಸೇರ್ಪಡೆಯ ವಿಚಾರ ತಿಳಿಸಿದ್ದಾರೆ.

Find Out More:

Related Articles: