ನನ್ನ ಸಾಧನೆಗೆ ರವೀಂದ್ರ ಜಡೇಜ ಸ್ಫೂರ್ತಿ

Soma shekhar
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್‌ ಸಹಿತ 5 ವಿಕೆಟ್‌ ಉರುಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ಸ್ಪಿನ್ನರ್‌ ಆಸ್ಟನ್‌ ಅಗರ್‌, ತಮ್ಮ ಸಾಧನೆಗೆ ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಹೌದು, ಅಷ್ಟೇಲ್ಲಾ ಹೇಗೆ ನಡೆಯಿತು, ಸ್ಪೂರ್ತಿಯಾಗಿದ್ದು ಹೇಗೆ ಗೊತ್ತಾ!? 
 
ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ಬೀಗಿದೆ.ವಜೋಹಾನ್ಸ್‌ ಬರ್ಗ್‌ ನಲ್ಲಿ ಜರುಗಿದ ಮೊದಲ ಟಾಸ್‌ೂ೫ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ಆಸಿಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 196 ರನ್‌ ಕಲೆಹಾಕಿ 197 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ  ಆಫ್ರೀಕಾ ತಂಡ ಅಗರ್‌ ಅವರ ಪರಿಣಾಮಕಾರಿ ದಾಳಿ ಎದುರು ಕೇವಲ 89ರನ್‌ ಗೆ ಕುಸಿದಿತ್ತು. ಹರಿಣಗಳ ಇನಿಂಗ್ಸ್‌ ನ 8ನೇ ಓವರ್‌ ನಲ್ಲಿ ದಾಳಿಗಿಳಿದ ಅಗರ್‌, 4, 5 ಮತ್ತು ಆರನೇ ಎಸೆತಗಳಲ್ಲಿ ಕ್ರಮವಾಗಿ ಫಾಫ್‌ ಡು ಪ್ಲೆಸಿ, ಆಯಂಡಿಲೆ ಪೆಹ್ಲುಕ್ವಾಯೊ ಹಾಗೂ ಡೇಲ್‌ ಸ್ಟೇಯ್ಸ್‌ ಅವರ ವಿಕೆಟ್‌ ಪಡೆದು ಹ್ಯಾಟ್ರಿಕ್‌ ಸಾಧನೆ ಹರಿಣಗಳ ಪತನಕ್ಕೆ ಮುನ್ನುಡಿ ಬರೆದರು.
 
ಆಫ್ರೀಕಾ ಆಲ್ ಔಟ್ ಆದ ಬಳಿಕ  ಮಾತನಾಡಿರುವ ಹ್ಯಾಟ್ರಿಕ್ ಸಾಧಕ ಅಗರ್‌, ಭಾರತದಲ್ಲಿ ನಡೆದ ಏಕದಿನ ಸರಣಿ ಬಳಿಕ ಜಡೇಜಾ ಅವರೊಂದಿಗೆ ನಡೆಸಿದ ಮಾತುಕತೆಯೇ ಈ ಸಾಧನೆಗೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. 'ಭಾರತ ಸರಣಿ ಬಳಿಕ ಜಡೇಜಾ ಜೊತೆ ಉತ್ತಮವಾದ, ಸ್ನೇಹಯುತವಾದ ಮಾತುಕತೆ ನಡೆಸಿದ್ದೆ. ಜಡೇಜ ನನ್ನ ಫೇವರಿಟ್ ಆಟಗಾರ. ನಾನೂ ಜಡೇಜಾ ರೀತಿ ಆಡಲು ಬಯಸುತ್ತೇನೆ' ಎಂದು ಹೇಳಿದ್ದಾರೆ. 
 
ಅಷ್ಟೇ ಅಲ್ಲದೆ, 'ಖಂಡಿತಾ ಆತ ರಾಕ್‌ ಸ್ಟಾರ್‌. ಅಮೋಘ ಫೀಲ್ಡರ್‌. ಸ್ಪಿನ್‌ ಬೌಲಿಂಗ್ ಮಾಡಬಲ್ಲ. ಧನಾತ್ಮಕ ಆಲೋಚನೆಯೊಂದಿಗೆ ಬ್ಯಾಟಿಂಗ್‌ ನಡೆಸುತ್ತಾರೆ. ಫೀಲ್ಡಿಂಗ್‌ ನಲ್ಲಿಯೂ ಅದೇ ಮನೋಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ' ದು ತಿಳಿಸಿದ್ದಾರೆ. ಎಡಗೈ ಆಫ್‌ ಸ್ಪಿನ್ನರ್‌ ಗಳಾಗಿರುವ ಈ ಇಬ್ಬರೂ ತಮ್ಮ ತಮ್ಮ ತಂಡಗಳ ಪರ ಏಳನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್‌ ಮಾಡುತ್ತಾರೆ ಎಂಬುದು ಮತ್ತೊಂದು ವಿಶೇಷವಾಗಿದೆ.
 
 
 

Find Out More:

Related Articles: