ಭಾರತೀಯ ನಾರಿಯ ಜೊತೆ ಎಂಗೇಜ್ ಆಗುವ ಮೂಲಕ ಶಾಕ್ ನೀಡಿದ ಮ್ಯಾಕ್ಸ್ ವೆಲ್

Soma shekhar
ನವದೆಹಲಿ: ಕ್ರಿಕೆಟ್​ ಆಸ್ಟ್ರೇಲಿಯಾದ ಆಲ್​ ರೌಂಡರ್​ ಸಿಕ್ಸರ್ ಸುರಿಮಳೆ ಗೈಯ್ಯುವ ಆಟಗಾರ ಗ್ಲೇನ್​ ಮ್ಯಾಕ್ಸ್ ​ವೆಲ್​ ಅವರು ಭಾರತೀಯ ಮೂಲದ ಗರ್ಲ್ ​ಫ್ರೆಂಡ್​ ವಿನಿ ರಾಮನ್​ ರೊಂದಿಗೆ ಎಂಗೇಜ್​ ಮೆಂಟ್​ ಮಾಡಿಕೊಂಡಿರುವ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಂ ಮೂಲಕ ಬುಧವಾರ ಖಚಿತಪಡಿಸಿದ್ದಾರೆ. ಹೌದು, ಭಾರತೀಯ ನಾರಿಯ ಜೊತೆಗೆ ಎಂಗೇಜ್ ಆಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ವಿನಿ ರಾಮನ್ ಯಾರು ಗೊತ್ತಾ!?
 
ತಮ್ಮ ಭಾವಿ ಪತ್ನಿಯೊಂದಿಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಫೋಟೋವನ್ನು ಮ್ಯಾಕ್ಸ್​ ವೆಲ್ ಇನ್​ ಸ್ಟಾಗ್ರಾಂನಲ್ಲಿ ರಿಂಗ್​ ಪೋಸ್ ನ ಪೋಟೋವನ್ನು ಪೋಸ್ಟ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ವಿನಿ ರಾಮನ್​ ಮ್ಯಾಕ್ಸ್ ​ವೆಲ್​ ತೊಡಿಸಿರುವ ರಿಂಗ್​ ಅನ್ನು ಪ್ರದರ್ಶಿಸಿದ್ದಾರೆ. ಹೌದು, ಅಂದಹಾಗೆ ವಿನಿ ರಾಮನ್​ ಕೂಡ ತಮ್ಮ ಇನ್​ ಸ್ಟಾಗ್ರಾಂನಲ್ಲಿ ಇದೇ ಫೋಟೋವನ್ನು ಪೋಸ್ಟ್​ ಮಾಡಿಕೊಂಡಿದ್ದು, ಕಳೆದ ವಾರ ನನ್ನ ನೆಚ್ಚಿನ ವ್ಯಕ್ತಿ ನನ್ನೊಂದಿಗೆ ಮದುವೆಯಾಗುತ್ತೀಯಾ ಎಂದು ಕೇಳಿದರು.
 
ನಾನು ಒಪ್ಪಿಗೆ ಸೂಚಿಸಿದೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅಲ್ಲಿಗೆ ಮ್ಯಾಕ್ಸ್​ವೆಲ್​ ಎಂಗೇಜ್​ ಆಗಿರುವುದು ಖಚಿತವಾದಂತಾಯಿತು. ಇನ್ನು ಮದುವೆ ದಿನಾಂಕ ಘೋಷಿಸುವುದೊಂದೆ ಬಾಕಿ ಇದ್ದು, ಅದಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಪ್ರಸ್ತುತ ಎಂಗೇಜ್ ವಿಷಯ ತಿಳಿದ ಅಭಿಮಾನಿಗಳು, ಕ್ರಿಕೆಟಿಗರು ಗಣ್ಯರು ಶಾಕ್ ಆಗಿರುವುದು ಮಾತ್ರ ಸತ್ಯ. ಹೌದು, ಏಕೆಂದರೆ ಮ್ಯಾಕ್ಸ್ ವೆಲ್ ಇಂಡಿಯಾ ಮೂಲದ ಗರ್ಲ್ ಫ್ರೆಂಡ್ ನೊಂದಿಗೆ ಎಂಗೇಜ್ ಆಗಿರುವುದು ಕೇಳಿ. 
 
ಕ್ರಿಕೆಟ್​ ವಿಚಾರದಲ್ಲಿ ಆಸೀಸ್ ಮ್ಯಾಕ್ಸ್ ​ವೆಲ್​ ತಮ್ಮ ಎಡ ಮೊಣಕೈನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ, ಗಾಯದಿಂದಾಗಿ 6 ರಿಂದ 8 ವಾರಗಳ ಕಾಲ ವಿಶ್ರಾಂತಿಯನ್ನು ಪಡೆಯಬೇಕಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ಖಚಿತಪಡಿಸಿದೆ. ಇನ್ನು ಮುಂದಿನ ಐಪಿಎಲ್​ ನಲ್ಲಿ ಪಂಜಾಬ್​ ತಂಡದ ಪರ ಮ್ಯಾಕ್ಸಿ ಕಣಕ್ಕಿಳಿಯಲಿದ್ದು, ಕಳೆದ ಬಾರಿ ಯಂತೆಯೇ ಸಿಕ್ಸರ್ ಗಳ ಸುರಿಮಳೆ ಗೈಯ್ಯಲಿದ್ದಾರೆ.

Find Out More:

Related Articles: