ಭಾರತ ಮಹಿಳಾ ತಂಡಕ್ಕೆ ವಿಂಡೀಸ್ ವಿರುದ್ಧ ಭರ್ಜರಿ ಜಯ

Soma shekhar
ಬ್ರಿಸ್ಬೇನ್: ಟೀಂ ಇಂಡಿಯಾದ ಗೆಲುವಿನ ಮಿಂಚಿನ ಓಟವನ್ನು ಇದೀಗ ಭಾರತ ವನಿತೆಯರು ಕೂಡ ಮುಂದುವರೆಸಿದ್ದಾರೆ. ವಿಂಡೀಸ್ ವಿರುದ್ಧದ ಅಂತಿಮ ಓವರ್ ​ನಲ್ಲಿ ಪೂನಂ ಯಾದವ್ ಮಿಂಚಿನ ಬೌಲಿಂಗ್ ಕೈಚಳಕದ ಫಲವಾಗಿ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ರೋಚಕ ಜಯ ದಾಖಲಿಸಿತು.
 
ವಿಂಡೀಸ್ ವಿರುದ್ಧದ ಕಡೇ ಓವರ್ ​ನಲ್ಲಿ 11 ರನ್ ರಕ್ಷಿಸಿಕೊಂಡ ಪೂನಂ ಯಾದವ್ ತಂಡಕ್ಕೆ 2 ರನ್ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ತಂಡ ಶುಕ್ರವಾರದಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಂಡಿತು. ಪಾಕಿಸ್ತಾನ ತಂಡದ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಆಲನ್ ಬಾರ್ಡರ್ ಫೀಲ್ಡ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್​ ಗೆ 107 ರನ್​ಗಳಿಸಿದರೆ, ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್​ಗೆ 105 ರನ್ ಗಳಿಸಷ್ಟೇ ಶಕ್ತವಾಯಿತು. ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು ಗೆಲ್ಲುವ ಫೇವರಿಟ್ ತಂಡವಾಗಿದೆ. ಹೌದು, ಈ ಹಿಂದಿನ ಪಂದ್ಯಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದ್ದು, ಇದೀಗ ಈ ಪಂದ್ಯದ ಮೇಲೂ ರೋಚಕತೆ ಹೆಚ್ಚಿಸಿದೆ. ಇದೀಗ ಯಾರು ಗೆಲ್ತಾರೆ ಎಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. 
 
ಸಂಕ್ಷಿಪ್ತ ಸ್ಕೋರ್ ಪಟ್ಟಿ: 
ಭಾರತ: 8 ವಿಕೆಟ್​ಗೆ 107 (ಶಫಾಲಿ ವರ್ಮ 12, ದೀಪ್ತಿ ಶರ್ಮ 21, ಶಿಖಾ ಪಾಂಡೆ 24*, ಅನಿಸಾ ಮೊಹಮದ್ 16ಕ್ಕೆ 2, ಶಮಿಲಿಯಾ ಕೊನ್ನೆಲ್ 20ಕ್ಕೆ 2), 
 
ವೆಸ್ಟ್ ಇಂಡೀಸ್: 7 ವಿಕೆಟ್​ಗೆ 105 (ಲೀ ಆನ್ ರ್ಕಿಬಿ 42, ಹ್ಯಾಲೀ ಮ್ಯಾಥ್ಯೂಸ್ 25, ಚಿನೆಲ್ಲೆ ಹೆನ್ರಿ 17, ಪೂನಂ ಯಾದವ್ 20ಕ್ಕೆ 3, ಶಿಖಾ ಪಾಂಡೆ 18ಕ್ಕೆ 1, ದೀಪ್ತಿ ಶರ್ಮ 12ಕ್ಕೆ 1, ಹರ್ವನ್​ಪ್ರೀತ್ ಕೌರ್ 15ಕ್ಕೆ 1).

Find Out More:

Related Articles: