ಕ್ರಿಕೆಟಿಗ ಶ್ರೀಶಾಂತ್‌ ರಿಂದ ಜಾಗತಿಕ ಮಟ್ಟದ ಕ್ರೀಡಾ ಅಕಾಡೆಮಿ ಸ್ಥಾಪನೆ, ಯಾರಾರಿಗೆ ಅವಕಾಶ ಗೊತ್ತಾ!?

Soma shekhar

ಉಡುಪಿ: ಶ್ರೀಶಾಂತ್ , ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ. ಹೌದು, ಕಾರಣಾಂತರಗಳಿಂದ ಇದೀಗ ಟೀಂ ಇಂಡಿಯಾದಲ್ಲಿ ಆಟ ಆಡದೇ ಇರಬಹುದು ಆದರೆ ಒಳ್ಳೆ ಕೆಲಸ ಮಾಡಲು ಮುಂದಾಗಿದ್ದಾರೆ. ಹೌದು, ಅದು ಕ್ರಿಕೆಟ್ ಅಕಾಡೆಮಿ ಸ್ಥಾಪನೆ. ಅದರಲ್ಲಿ ಯಾರು ತರಭೇತಿ ಪಡೆಯಬಹುದು ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ. 

 

ದಕ್ಷಿಣ ಭಾರತದ ಪ್ರಸಿದ್ಧ  ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸಮೀಪದ ಹಾಲ್ಕಲ್‌ ಎಂಬಲ್ಲಿ ಜಾಗತಿಕ ಮಟ್ಟದ ಕ್ರೀಡಾ ಅಕಾಡೆಮಿ ಸ್ಥಾಪಿಸುವುದಾಗಿ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಹಾಗೂ ವರ್ಲ್ಡ್‌ ಕಪ್‌ ಕ್ರಿಕೆಟ್‌ ವಿಜೇತ ಭಾರತ ತಂಡದ ಸದಸ್ಯ ಎಸ್‌ ಶ್ರೀಶಾಂತ್‌ ತಿಳಿಸಿದ್ದಾರೆ. ಹೌದು, ಇದನ್ನು ಅವರೇ ಹೇಳಿದ್ದಾರೆ. ಇಲ್ಲಿನ ರುಪೀ ಮಾಲ್‌ನಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಲ್ಲಿನ 16ಎಕರೆ ಜಾಗದಲ್ಲಿ ತಲೆಯೆತ್ತುತ್ತಿರುವ ಅಕಾಡೆಮಿಯು ಕ್ರಿಕೆಟ್‌ ಜತೆಗೆ ಫುಟ್‌ಬಾಲ್‌, ವಾಲಿಬಾಲ್‌, ಬಾಸ್ಕೆಟ್‌ ಬಾಲ್‌, ಬ್ಯಾಡ್ಮಿಂಟನ್‌ ಮತ್ತು ಅಥ್ಲೆಟಿಕ್ಸ್‌ಗಳಲ್ಲಿ ಸಾಮರ್ಥ್ಯ‌ ತೋರಬಲ್ಲ ಪ್ರತಿಭಾನ್ವಿತರನ್ನು ಗುರುತಿಸಿ ತರಬೇತಿ, ಪ್ರೋತ್ಸಾಹ ನೀಡುವ ಗುರಿ ಹೊಂದಿದ್ದು, ಆ ಮೂಲಕ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸಬೇಕೆಂದಿದ್ದಾರೆ.

 

ಈಗಾಗಲೇ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ನವೆಂಬರ್‌ 7 ರಂದು ಕಾರ್ಯಾರಂಭ ಮಾಡಲಿದೆ. ಇಲ್ಲಿಅತ್ಯಂತ ಪರಿಣಾಮಕಾರಿ ಹಾಗೂ ವಸತಿ ಸಹಿತ ತರಬೇತಿ ನೀಡಲಾಗುವುದು. ಇದರಲ್ಲಿ ಟೂರ್ನಮೆಂಟ್‌,ವನ್‌ ಟು ವನ್‌ ತರಬೇತಿ ಒಳಗೊಳ್ಳಲಿದೆ. ಈಗಾಗಲೇ ಪ್ರತೀ ವಿಭಾಗದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸಂಪರ್ಕಿಸಿದ್ದು, ಅವರು ಅಕಾಡೆಮಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದಿದ್ದಾರೆ.

 

 36 ದಿನಗಳತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಕ್ರೀಡಾಕ್ಷೇತ್ರದ ಪರಿಣತರ ಹಾಗೂ ಗಣ್ಯರ ಸಲಹೆಯಂತೆ ಫಿಟ್‌ನೆಸ್‌ ಮತ್ತು ಡಯಟ್‌ಗೆ ಆದ್ಯತೆ ನೀಡಲಾಗುವುದು.ಫಿಟ್‌ನೆಸ್‌, ಯೋಗ, ಧ್ಯಾನ, ಆಯುರ್ವೇದದ ಜತೆಗೆ ಭಾರತೀಯ ಸಂಸ್ಕೃತಿ, ಮೌಲ್ಯ ಮತ್ತು ಜೀವನ ಪದ್ಧತಿಯನ್ನು ರೂಢಿಗೆ ತರಲಾಗುವುದು ಎಂದು ಅಕಾಡೆಮಿಯ ಚಟುವಟಿಕೆಗಳನ್ನು ಅವರು ವಿವರಿಸಿದರು.

Find Out More:

Related Articles: