ಮುಂದಿನ ಐಪಿಎಲ್ ನಲ್ಲೂ ಎಂ.ಎಸ್ ಧೋನಿ ಆಡೋದು ಫಿಕ್ಸ್

Soma shekhar

ಚೆನ್ನೈ: ಮಹೇಂದ್ರ ಸಿಂಗ್ ಧೋನಿ, ಟೀಂ ಇಂಡಿಯಾದ ದಿ ಗ್ರೇಟ್ ಕ್ಯಾಪ್ಟನ್. ಹೌದು, ಭಾರತಕ್ಕೆ ಎರಡೆರೆಡು  ವಿಶ್ವಕಪ್ ಗೆದ್ದುಕೊಡುವ ಮೂಲಕ ಪ್ರತೀ ಭಾರತೀಯ ಕ್ರಿಕೆಟ್ ಅಭಿಮಾನಿಯ ಹೃದಯದಾಳದಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರೆಂದರೇ  ಅದು ಮಹೇಂದ್ರ ಸಿಂಗ್ ಧೋನಿ. ಹೌದು, ಇದೀಗ ಎಲ್ಲೆಡೆ ಧೋನಿ ವಿದಾಯದ ಮಾತುಗಳು ಕೇಳಿ ಬರುತ್ತಿದ್ದು, ಆದರೂ ಕೂಡ ಅಭಿಮಾನಿಗಳು ಬೇಸರ ಪಟ್ಟು ಕೊಳ್ಳುವ ಅಗತ್ಯತೆ ಇಲ್ಲ. ಯಾಕೆ ಗೊತ್ತಾ. ಇಲ್ಲಿದೆ ನೋಡಿ ಮಾಹಿತಿ. 

ಭಾರತ ತಂಡದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್​ ಗೂ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್ ​ಕೆ) ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ತಂಡದ ಮಾಲೀಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ. ಈ ವೇಳೆ ಧೋನಿ ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ಸಿ ಎಸ್ ​ಕೆ ಭಾಗವಾಗ ಲಿದ್ದಾರೆ ಎಂದು ಹೇಳಿದರು. ಇದರಿಂದ ಕೂಲ್ ಕ್ಯಾಪ್ಟನ್ ಅಭಿಮಾನಿಗಳು ಫುಲ್ ದಿಲ್ ಕುಶ್ ಆಗಿದ್ದಾರೆ. 

ಇತ್ತೀಚೆಗಷ್ಟೇ ಬಿಸಿಸಿಐ ಪ್ರಕಟಿಸಿದ ಕೇಂದ್ರ ಗುತ್ತಿಗೆ ಪಟ್ಟಿ ಯಿಂದಲ್ಲೂ ಧೋನಿ ಹೊರಬಿದ್ದಿದ್ದರು. ಇದು ಧೋನಿ ನಿವೃತ್ತಿ ಊಹಾಪೋಹಕ್ಕೆ ಮತ್ತಷ್ಟು ಇಂಬು ನೀಡಿತ್ತು. ‘ಜನರು ಏನೇ ಹೇಳಿದರೂ ಧೋನಿ ಮುಂದಿನ ಐಪಿಎಲ್​ ನಲ್ಲೂ ಆಡಲಿದ್ದಾರೆ. ಸಿಎಸ್​ಕೆ ತಂಡ ಅವರನ್ನು ಉಳಿಸಿಕೊಳ್ಳಲಿದೆ’ ಎಂದು ಇಂಡಿಯಾ ಸಿಮೆಂಟ್ ಕಾರ್ಯಕ್ರಮ ವೊಂದರಲ್ಲಿ ತಿಳಿಸಿದರು.ಎಂಎಸ್ ಧೋನಿ 2008 ರಿಂದಲ್ಲೂ ಸಿಎಸ್​ಕೆ ಭಾಗವಾ ಗಿದ್ದಾರೆ. ಸಿಎಸ್​ಕೆ ಫ್ರಾಂಚೈಸಿ ಅಮಾನತುಗೊಂಡಿದ್ದ ವೇಳೆ 2 ವರ್ಷ ಪುಣೆ ತಂಡ ಸೇರಿಕೊಂಡಿದ್ದರು.

 38 ವರ್ಷದ ಎಂಎಸ್ ಧೋನಿ ಕಳೆದ ಜುಲೈ ನಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಎದುರು ಸೋಲನುಭವಿಸಿದ ಬಳಿಕ ಕ್ರಿಕೆಟ್ ಜೀವನದಿಂದ ದೂರ ಉಳಿದಿದ್ದಾರೆ. ಧೋನಿ ಮರಳಿ ಟೀಂ ಇಂಡಿಯಾ ತಂಡ ಕೂಡಿಕೊಂಡು ಹೆಲಿಕ್ಯಾಪ್ಟರ್ ಶಾಟ್ ಒಡೆಯ ಬೇಕೆಂಬುದು ಸಹಸ್ರಾರು ಅಭಿಮಾನಿಗಳು ಆಶಯವಾಗಿದೆ.

Find Out More:

Related Articles: