ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ನೀಡಲಾಗಿದ್ದ ಭೂಮಿಯಲ್ಲಿ ಭ್ರಷ್ಟಾಚಾರ

somashekhar
ಮಾಜಿ ಸಿಎಂ ಸಿದ್ದು ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಅವಧಿಯಲ್ಲಿ ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕೆ ನೀಡಿದ್ದ ಭೂಮಿಯಲ್ಲಿ ಭಾರೀ ಪ್ರಮಾಣದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರ ಅಂದಾಜು ಮೊತ್ತ ಎಷ್ಟೆಂದರೆ, ಸುಮಾರು ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಭೂಮಿ ದುರ್ಬಳಕೆ ಆಗುತ್ತಿರೋದು ಬೆಳಕಿಗೆ ಬಂದಿದೆ. ಹೌದು ಈ ಕುರಿತು ಸಚಿವ ಜಗದೀಶ್ ಶೆಟ್ಟರ್ ಅವರ ಗಂಭೀರವಾಗಿ ಪರಿಣನೆಗೆ ತೆಗೆದುಕೊಂಡಿದ್ದಾರೆ.


ಆದರೆ, ರಾಜ್ಯ ಸರ್ಕಾರ ಇದನ್ನೂ ಕೂಡ ತನಿಖೆಗೆ ಆದೇಶ ನೀಡಲು ಮುಂದಾಗಿದೆ. ಹಾಗಾದರೆ ಎಲ್ಲೆಲ್ಲಿ ಈ ಬ್ರಷ್ಟಾಚಾರ ನಡೆದಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ಮೂಲಕ ರಾಜಧಾನಿ ಬೆಂಗಳೂರು, ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮೈಸೂರು, ಮಹಾನಗರ ಪಾಲಿಕೆ ಪ್ರದೇಶಗಳಾದ ಶಿವಮೊಗ್ಗ, ತುಮಕೂರು, ಬಿಜಾಪುರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಭೂಮಿ ನೀಡಲಾಗಿತ್ತು.


ನಿಮಗೆ ಇನ್ನೊಂದು ವಿಷಯ ಗೊತ್ತಾ? ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಕೆಐಎಡಿಬಿ ಉದ್ಯಮಿಗಳಿಗೆ ಜಮೀನನ್ನು ನೀಡುತ್ತದೆ. ಆದರೆ ಇಲ್ಲಿ ಮತ್ತೊಂದು ಗಮನಿಸಬೇಕಾದ ಪ್ರಮುಖ ಅಂಶ ಏನೆಂದರೆ, ಕೆಐಎಡಿಬಿ ಮೂಲಕ ಕೈಗಾರಿಕಾ ಸ್ಥಾಪನೆಗಾಗಿ ಭೂಮಿ ಖರೀದಿಸಿದ್ದ ಉದ್ಯಮಿಗಳು ಇದರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.


ರಿಯಲ್ ಎಸ್ಟೇಟ್ ನವರು ಇದರಲ್ಲಿ ಭಾಗಿಯಾಗಿದ್ದರಿಂದ ಇಲ್ಲಿ ಸಹಜವಾಗಿಯೇ ಬ್ರಷ್ಟಾಚಾರದ ಹೊಗೆ ಆಡಿದೆ. ಹೌದು ಹೀಗೆ ಜಮೀನು ಖರೀದಿ ಮಾಡಿದವರು ಹಣದ ಆಸೆಗಾಗಿ ಒಂದಕ್ಕಿಂತ 5 ಪಟ್ಟು ದರದಲ್ಲಿ ರಿಯಲ್ ಎಸ್ಟೇಟ್‍ನವರಿಗೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಹೀಗೆ ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎನ್ನಲಾಗುತ್ತಿದೆ. ಇದನ್ನು ತುಂಬಾ ಗಂಭಿರವಾಗಿ ಪರಿಗಣನೆಗೆ ತೆಗೆದುಕೊಂಡಿರುವ ಶೆಟ್ಟರ್, ಸಿಎಂ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ತನಿಖೆಗೆ ವಹಿಸುವ ಸಾಧ್ಯತೆ ಇದೆ ಎನ್ನುವುದನ್ನು ಅಲ್ಲಗಳೇಯೋಕೆ ಆಗಲ್ಲ.


Find Out More:

Related Articles: