ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಭ್ರಮೆಯಲ್ಲಿ ತೇಲುತ್ತಿದೆ. ಆ ಕಾಂಗ್ರೆಸ್ ಪಕ್ಷದ ಕಡೆ ಗೆ ಹೋದವರು ಇರುಳ ಕಂಡ ಭಾವಿಗೆ ಬಿದ್ದಂತೆಯೇ ಸರಿ, ಅಲ್ಲಿ ಯಾರಿಗೂ ಏನೂ ಸಿಗುವುದಿಲ್ಲ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ. ಟಿ ರವಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ. ಅದರ ಜೊತೆಗೆ ನಮ್ಮದು ಐಡಿಯಾಲಜಿ ರಿಲೆಟೆಡ್ ರಾಜಕೀಯ ಪಕ್ಷವಾಗಿದೆ. ಈ ಪಕ್ಷದಿಂದ ಹೊರಗೆ ಹೋದವರು ಕೆಡಲಿದ್ದಾರೆ ಆದರೆ ಪಕ್ಷ ಕಡೆಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಹೇಳಿದರು.
ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುತ್ತಿರುವ ನಾಯಕರಿಗೆ ಉತ್ತರಿಸಿದ ಅವರು, ವಿಜಯ ಶಂಕರ್ ಉದಾಹರಣೆಗೆ ತೆಗೆದುಕೊಳ್ಳಿ ಕಾಂಗ್ರೆಸ್ ಹೋಗಿ ಮರಳಿ ಈಗ ಬಿಜೆಪಿಗೆ ಬಂದಿದ್ದಾರೆ. ಅಲ್ಲದೇ ಅನೇಕ ನಾಯಕರು ಕಾಂಗ್ರೆಸ್ನಲ್ಲಿ ಕೆಟ್ಟ ಅನುಭವವಾಗಿ ವಾಪಸ್ ಬಂದಿದ್ದಾರೆ. ಈ ಅನುಭವದ ನಂತರವೂ ಹೋದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ಎಂದರು. ಅಲ್ಲದೇ ಶರತ್ ಬಚ್ಚೇಗೌಡರ ಕುಟುಂಬಕ್ಕೆ ಪಕ್ಷ ಹಲವು ಅವಕಾಶ ಮಾಡಿಕೊಟ್ಟಿದೆ. 2008 ರಲ್ಲಿ ಬಚ್ಚೇಗೌಡರಿಗೆ ಅವಕಾಶ ನೀಡಿ ಮಂತ್ರಿ ಮಾಡಲಾಯಿತು. ನಂತರ ಸೋತರೂ ಎರಡು ಬಾರಿ ಎಂಪಿ ಟಿಕೆಟ್ ನೀಡಲಾಗಿದೆ. ಪಕ್ಷ ಏನು ಕಡಿಮೆ ಮಾಡಿದೆ? ಮುಂದಿನ ರಾಜಕೀಯ ಜೀವನದ ಬಗ್ಗೆ ಆಲೋಚನೆ ಮಾಡಿ ಎಂದು ಸಿಟಿ ರವಿ ಅವರು ಶರತ್ ಬಚ್ಚೇಗೌಡ ಅವರಿಗೆ ಹೇಳಿದರು.
ಶರತ್ ಬಚ್ಚೇಗೌಡ ಅವರು ಹೊಸಕೊಟೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಅನರ್ಹ ಶಾಸಕ ಎಂ.ಟಿ ನಾಗರಾಜ್ ಅವರು ಕಾಂಗ್ರೆಸ್ ಪಕ್ಷದಿಂದ ಅನರ್ಹಗೊಂಡಿದ್ದರಿಂದ ಅವರು ಬಿಜೆಪಿ ಕಡೆ ಮುಖಮಾಡಿದ್ದಾರೆ. ಈಗ ಶರತ್ ಬಚ್ಚೇಗೌಡ ಬದಲಿಗೆ ಹೊಸಕೊಟೆಯ ಬಿಜೆಪಿ ಟಿಕೆಟ್ ಎಂಟಿಬಿಗೆ ಸಿಗುವುದು ಬಹುತೇಕ ಖಚಿತವಾಗಿ.
ಪಕ್ಷದಲ್ಲಿ ಉಪಚುನಾವಣೆ ಟಿಕೆಟ್ ಗಾಗಿ ಅಸಮಾಧಾನ ಭುಗಿಲೆದಿದ್ದು, ಯಾರಿಗೆ ಸಿಗುತ್ತೋ ಯಾರಿಗೆ ಇಲ್ಲವೋ ಎಂಬುದು ಒಂದು ತಿಳಿಯದಂತಾಗಿದೆ. ಆದರೆ ಸರ್ಕಾರ ರಚಿಸಲು ಕಾರಣರಾದ ಅನರ್ಹರಿಗೆ ಮಾತ್ರ ಟಿಕೆಟ್ ಪಕ್ಕಾ ಆಗಿದೆ.