ಅಭಿವೃದ್ಧಿಯಲ್ಲಿ ನಮ್ಮದು ಎಕ್ಸ್ ಪ್ರೆಸ್ ಟ್ರೈನ್ ಎಂದಿದ್ದು ಯಾರು!?

frame ಅಭಿವೃದ್ಧಿಯಲ್ಲಿ ನಮ್ಮದು ಎಕ್ಸ್ ಪ್ರೆಸ್ ಟ್ರೈನ್ ಎಂದಿದ್ದು ಯಾರು!?

somashekhar

ಮಂಗಳೂರು: ಕಳೆದ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿಯ ಪಥವು ಸಂಪೂರ್ಣವಾಗಿ ಕುಸಿದು ಹೋಗಿತ್ತು, ಇದೀಗ ನಮ್ಮ ಸರ್ಕಾರ ಬಂದ ತಕ್ಷಣ ಅಭಿವೃದ್ಧಿ ಎಂಬುದು ಎಕ್ಸ್ ಪ್ರೆಸ್ ಟ್ರೈನ್ ತರ ಓಡುತ್ತಿದೆ ಎಂದ ಇವರು ಅಯೋಧ್ಯೆಯ ಬಗ್ಗೆಯೂ ಸಹ ಮಾತನಾಡಿದ್ದಾರೆ. ಏನಿದು ಸ್ಟೋರಿ ನೀವೆ ನೋಡಿ. 

ಅಯೋಧ್ಯೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ. ರಾಮ ಮಂದಿರವಲ್ಲದೆ ರಾಷ್ಟ್ರ ಮಂದಿರವಾಗಿ ಪರಿವರ್ತನೆಯಾಗಿದೆ ಎಂದು ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ರಾಮ ಮಂದಿರ ಈಗ ರಾಷ್ಟ್ರ ಮಂದಿರವಾಗಿ ಪರಿವರ್ತನೆ ಯಾಗಿದೆ. ಆರ್ಟಿಕಲ್‌ 370 ರದ್ದು, ನಿನ್ನೆ ಬಂದಿರುವ ರಾಮ ಮಂದಿರ ತೀರ್ಪು ದೇಶದ ಜನರ ವಿಶ್ವಾಸವನ್ನ ಹೆಚ್ಚು ಮಾಡಿದೆ.

ಅದರ ಜೊತೆಗೆ ಅನರ್ಹರ ಬಗ್ಗೆ ಮಾತನಾಡಿ, ಅನರ್ಹರಿಗೆ ಟಿಕೆಟ್ ಪಕ್ಕಾ, ಯಡಿಯೂರಪ್ಪ ಎಂದಿದ್ದಾರೆ. ಇನ್ನು, ರಾಜ್ಯದ ಹಲವೆಡೆ ಭಾರಿ ಮಳೆಯಿಂದಾದನೆರೆ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದು ಸಿಎಂ ಬಿಎಸ್‌ ಯಡಿಯೂರಪ್ಪ ಮಾತ್ರ. ಕಳೆದೊಂದು ವರ್ಷದಿಂದ ನಿಂತ ನೀರಿನಂತಿದ್ದ ರಾಜ್ಯ ಸರಕಾರಕ್ಕೆ ಈಗ ವೇಗ ದೊರೆತಿದೆ ಎಂದು ಸಂಸದರೂ ಆಗಿರುವ ನಳಿನ್‌ ಕುಮಾರ್‌ ಕಟೀಲ್‌ ಚಿಕ್ಕಮಗಳೂರಿನಲ್ಲಿ ರಾಜ್ಯ ಬಿಜೆಪಿ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇದರ ಮಧ್ಯೆ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಹಾಗೂ ಕಾಂಗ್ರೆಸ್‌ ನಾಯಕ, ಕನಕಪುರದ ಬಂಡೆ ಡಿಕೆ ಶಿವಕುಮಾರ್‌ ಭೇಟಿ ಮಾಡಿರುವ ಬಗ್ಗೆಯೂ ನಳಿನ್‌ ಕುಮಾರ್‌ ಕಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದಲ್ಲಿ ವೈಯಕ್ತಿಕ ಸಂಬಂಧಗಳು ಇರುತ್ತವೆ. ಸಂಬಂಧ ಇದ್ದ ಕೂಡಲೇ ರಾಜು ಕಾಗೆ ಕಾಂಗ್ರೆಸ್ ಸೇಪರ್ಡೆಯಾಗಲ್ಲ. ನಾನು ಹಾಗೂ ಜನಾರ್ಧನ ಪೂಜಾರಿ ಸಹ ಹಳೆಯ ಸ್ನೇಹಿತರು. ಅವರು ಬಿಜೆಪಿಗೆ ಬರ್ಲಿಲ್ಲ, ನಾನು ಕಾಂಗ್ರೆಸ್ಗೆ ಹೋಗ್ಲಿಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೊಂಡಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ, ಅನರ್ಹರ ನ್ಯಾಯಲಯದ ತೀರ್ಪಿಗೆ ಕಾಯುತ್ತೇವೆ. ಸಿಎಂ ಯಡಿಯೂರಪ್ಪ ಸುಪ್ರೀಂ, ಅವರಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಸರಕಾರ ನೋಡಿಕೊಳ್ಳುತ್ತಾರೆ, ನಾನು ಪಕ್ಷ ನೋಡಿಕೊಳ್ಳುತ್ತೇನೆ‌ ಅಷ್ಟೇ ಎಂದು ತಿಳಿಸಿದ್ದಾರೆ.

Find Out More:

Related Articles:

Unable to Load More