ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ - ಪ್ರತಿಭಟನೆಗೆ ಕರೆ

somashekhar
ಬೆಂಗಳೂರು: ಪತ್ರಕರ್ತ ಮತ್ತು ಸತ್ಯ ಬಗಿರಂಗಗೊಳಿಸುವ ಈ ವ್ಯಕ್ತಿಯನ್ನು ಬಂಧಿಸುವ ಮೂಲಕ ನ್ಯಾಯವನ್ನು ಹತ್ತಿಕ್ಕುವ ಕೆಲಸವಾಗುತ್ತಿವೆ. ನಕ್ಸಲ್ ಆರೋಪದಲ್ಲಿ ರಾಯಚೂರು ಪೊಲೀಸರಿಂದ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ದೊಡ್ಡಿಪಾಳ್ಳ ನರಸಿಂಹಮೂರ್ತಿ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳು ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿವೆ. ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಬಂಧನ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಲು ಮುಂದಾಗಿದೆ.

25 ವರ್ಷಗಳ ಹಿಂದಿನ ನಕ್ಸಲ್ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಯಚೂರು ಪೊಲೀಸರು ದೊಡ್ಡಿಪಾಳ್ಯ ನರಸಿಂಹಮೂರ್ತಿಯನ್ನು ಶುಕ್ರವಾರ ಬಂಧಿಸಿದ್ದರು. ನರಸಿಂಹಮೂರ್ತಿ ವಿನೋದ್ ಎಂಬ ಹೆಸರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ನಂತರದಲ್ಲಿ ತಲೆಮರೆಸಿಕೊಂಡಿದ್ದರು ಎಂಬುವುದು ಪೊಲೀಸರ ಆರೋಪ. ಆದರೆ ಪ್ರಗತಿಪರ ಸಂಘಟನೆಗಳು ಪೊಲೀಸರ ಆರೋಪವನ್ನು ನಿರಾಕರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ನರಸಿಂಹಮೂರ್ತಿ ಬಂಧನ ವಿರೋಧಿಸಿ ಅಭಿಯಾನ ನಡೆಯುತ್ತಿವೆ.

ತಲೆಮರೆಸಿಕೊಂಡಿದ್ದ ರಾಯಚೂರು ಮಾವೋವಾದಿ 25 ವರ್ಷಗಳ ಬಳಿಕ ಬಂಧನ ಪೊಲೀಸರ ಪ್ರಕಾರ, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ರಾಯಚೂರು ನಗರದ ನೇತಾಜಿ ಪೊಲೀಸ್ ಠಾಣೆಯಲ್ಲಿ 1994ರಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣ ಹಾಗೂ 2001ರಲ್ಲಿ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳಲ್ಲಿ ವಿನೋದ್ ಎಂಬ ವ್ಯಕ್ತಿ ಆರೋಪಿಯಾಗಿದ್ದಾನೆ. ಅಕ್ರಮ ಶಸ್ತ್ರಾಸ್ತ ಹಾಗೂ ಕೊಲೆಯತ್ನ, ಅಕ್ರಮ ಸ್ಪೋಟಕ ಬಳಕೆಯ ಗಂಭೀರ ಅಪರಾಧ ಇದಾಗಿದ್ದು ಆರೋಪಿ ವಿನೋದ್ ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇದೀಗ ದೊಡ್ಡಿಪಾಳ್ಯ ನರಸಿಂಹಮೂರ್ತಿ ಎಂಬ ಹೆಸರಿನಲ್ಲಿ ಸಿಕ್ಕಿದ್ದಾನೆ ಎನ್ನಲಾಗಿದೆ.

ಆದರೆ ಪೊಲೀಸರ ಆರೋಪವನ್ನು ನರಸಿಂಹಮೂರ್ತಿ ಬೆಂಬಲಿಗರು ಹಾಗೂ ಪ್ರಗತಿಪರರು ನಿರಾಕರಿಸಿದ್ದಾರೆ. ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸ್ ಪೇದೆಯೊಬ್ಬರು ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ವಿನೋದ್ ಎಂದು ಗುರುತಿಸಿದ್ದಾರೆ. ಇದನ್ನು ಪೊಲೀಸರು ಬಂಧನದ ಸಾಕ್ಷಿಯಾಗಿ ತೋರಿಸುತ್ತಾರೆ. ಇದು ಪೊಲೀಸ್ ಸಾಕ್ಷಿಯೇ ಹೊರತು ಸ್ವತಂತ್ರ ಸಾಕ್ಷಿಯಲ್ಲ. ರಾಜ್ಯದಲ್ಲಿ ಈ ನಡೆಯುತ್ತಿರುವುದರಿಂದ ಪ್ರಗತಿಪರರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ವಾದ ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.




Find Out More:

Related Articles: