ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಹಠಾತ್ ಎದುರಾಗಿರುವ ಉಪ ಚುನಾವಣೆ ಎದುರಿಸಲು ಸ್ವಲ್ಪಮಟ್ಟಿಗೆ ಸಜ್ಜಾಗಿರುವ ಪಕ್ಷವೆಂದರೆ ಕಾಂಗ್ರೆಸ್. ಅನರ್ಹ ಶಾಸಕರನ್ನು ಪಕ್ಷದಿಂದ ಹೊರಹಾಕಿದ ನಂತರ ಈಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲ್ಲಲೇಬೇಕೆಂದು ಪ್ಲಾನೊಂದು ಸಿದ್ಧಪಡಿಸಿಕೊಂಡಿದೆ.
ಇಷ್ಟೇ ಅಲ್ಲದೆ ಅನರ್ಹರ ಎಲ್ಲಾ ಕ್ಷೇತ್ರಗಳಲ್ಲಿ ಭಾರಿ ಸಮಾವೇಶ ನಡೆಸಲು ರೂಪರೇಷೆ ಸಿದ್ಧಪಡಿಸಿತ್ತು. ಇದರ ಮೊದಲ ಸಭೆ ಶನಿವಾರದಂದೇ ಹೊಸಕೋಟೆಯಲ್ಲಿ ನಡೆದಿದ್ದು, ಈ ಸಭೆ ನಡೆಯುವ ವೇಳೆಗೆ ಉಪ ಚುನಾವಣೆ ದಿನಾಂಕ ಪ್ರಕಟವಾಗಿದ್ದು ಕಾಕತಾಳೀಯ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ ಕುಸಿಯಲು ಕಾರಣರಾದ ಅನರ್ಹರಿಗೆ ಬುದ್ಧಿ ಕಲಿಸುವ ಛಲ ಕಾಂಗ್ರೆಸ್‌ನಲ್ಲಿ ಇದೆ. ಅನರ್ಹರ ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತೆ ಗೆದ್ದುಕೊಳ್ಳಲು ಸಾಧ್ಯವಾದರೆ ಅಯಾಚಿತವಾಗಿ ಬಿಜೆಪಿ ಸರ್ಕಾರವು ಕುಸಿಯುತ್ತದೆ. ಹೀಗಾಗಿ ಈ ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಈಗಾಗಲೇ ತಯಾರಿ ಆರಂಭಿಸಿದೆ. ಮೂಲಗಳ ಪ್ರಕಾರ ಸಂಭಾವ್ಯರ ಪಟ್ಟಿಈಗಾಗಲೇ ಸಿದ್ಧವಿದೆ. ಇನ್ನೊಂದೆರಡು ದಿನಗಳಲ್ಲಿ ಪಕ್ಷದ ನಾಯಕರು ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಿ ಹೈಕಮಾಂಡ್ ಒಪ್ಪಿಗೆಗೆ ಕಳುಹಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಸಂಭಾವ್ಯರು ಪಟ್ಟಿ:
1. ಗೋಕಾಕ್: ಲಖನ್ ಜಾರಕಿಹೊಳಿ
2. ಕೆ.ಆರ್. ಪುರ: ಪದ್ಮಾವತಿ (ಬೈರತಿ ಸುರೇಶ್ ಪತ್ನಿ)/ ಎಂ.ನಾರಾಯಣ ಸ್ವಾಮಿ.
3. ಕಾಗವಾಡ: ಪ್ರಕಾಶ್ ಹುಕ್ಕೇರಿ
4. ಯಶವಂತಪುರ: ಜವರಾಯಿ ಗೌಡ/ ಮಾಗಡಿ ಬಾಲಕೃಷ್ಣ/ ಎಂ. ರಾಜಕುಮಾರ್
5. ವಿಜಯನಗರ: ಮಾಜಿ ಶಾಸಕ ಗವಿಯಪ್ಪ/ಸೂರ್ಯ ನಾರಾಯಣ ರೆಡ್ಡಿ
6. ಶಿವಾಜಿನಗರ: ರಿಜ್ವಾನ್ ಅರ್ಷದ್/ ಎಸ್.ಎ. ಹುಸೇನ್
7. ಚಿಕ್ಕಬಳ್ಳಾಪುರ: ಡಾ. ಎಂ.ಸಿ. ಸುಧಾಕರ್/ ಆಂಜನಪ್ಪ
8. ಹೊಸಕೋಟೆ: ಶರತ್ ಬಚ್ಚೇಗೌಡ /ನಾರಾಯಣಗೌಡ
9. ಅಥಣಿ: ಎ.ಬಿ. ಪಾಟೀಲ್
10: ರಾಣೆಬೆನ್ನೂರು: ಕೆ.ಬಿ.ಕೋಳಿವಾಡ್ ಅಥವಾ ಪುತ್ರ ಪ್ರಕಾಶ್ ಕೋಳಿವಾಡ್,
11. ಯಲ್ಲಾಪುರ: ಭೀಮ್ಮಣ್ಣ ನಾಯ್ಕ್/ ಪ್ರಶಾಂತ್ ದೇಶಪಾಂಡೆ,
12. ಹಿರೇಕೆರೂರು: ಜಿ.ಡಿ. ಪಾಟೀಲ್ /ಯು.ಬಿ. ಬಣಕಾರ್ ಪುತ್ರ
13. ಹುಣಸೂರು: ಎಚ್.ಪಿ.ಮಂಜನಾಥ್
14. ಮಹಾಲಕ್ಷ್ಮೇ ಬಡಾವಣೆ: ಶಿವರಾಜ್/ ಎಚ್.ಸಿ. ಮಂಜುನಾಥಗೌಡ
15. ಕೆ.ಆರ್ ಪೇಟೆ: ಕೆ.ಬಿ. ಚಂದ್ರಶೇಖರ್/ಕಿಕ್ಕೇರಿ ಸುರೇಶ್.