ಅಭಿನಂದನ್ ಗೆ ವೀರಚಕ್ರ ಪ್ರಶಸ್ತಿ

somashekhar

ಪಾಕಿಸ್ತಾನದ ವಿಮಾನಗಳನ್ನು ಬೆನ್ನಟ್ಟಿ ಹೋಗಿ ಪಾಕ್ ಸೈನ್ಯದ ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಹೌದು ಈ ಅಭಿನಂದನ್ ಅವರಿಗೆ ಇದೀಗ ವೀರ ಚಕ್ರ ಪ್ರಶಸ್ತಿ ಪ್ರಾಪ್ತವಾಗಿದೆ. ನಾಳೆ ನಡೆಯಲಿರುವ ಸ್ವಾತಂತ್ರೋತ್ಸವದ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.


ಆವತ್ತು ಅಭಿನಂದನ್ ವರ್ಧಮಾನ ಪಾಕ್ ಸೈನ್ಯದ ಯುದ್ಧ ವಿಮಾನವನ್ನು ಹೊಡೆದು ಉರುಳಿಸಿ ಇಡೀ ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡಿದ್ದ. ಪಾಕ್ ಸೈನ್ಯದ ವಶದಲ್ಲಿ ಇದ್ದರೂ ಅವರಿಗೆ ಹೆದರದೇ ಬೆದರದೇ ದಿಟ್ಟ ಉತ್ತರ ನೀಡಿದ್ದ. ಈ ವಿಡಿಯೋ ದೇಶದ ತುಂಬೆಲ್ಲ ವೈರಲ್ ಆಗಿತ್ತು. ಅಭಿನಂದನ್ ಅವರನ್ನು ವಾಪಾಸ್ ಕರೆ ತರಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗಿತ್ತು. ಇದರಲ್ಲಿ ಕೇಂದ್ರ ಸರ್ಕಾರ ಯಶಸ್ವಿಯೂ ಆಗಿತ್ತು.


ಹೌದು ಭಾರತದ ಸಿಆರ್‌ಪಿಎಫ್‌ ಯೋಧರ ಮೇಳೆ ಪುಲ್ವಾಮಾದಲ್ಲಿ ದಾಳೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಭಾಲಾಕೋಟ್‌ನ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನನೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರ ಎಂಬಂತೆ ಪಾಕಿಸ್ತಾನದ ಸೈನ್ಯ ಫೆ.೨೭ ರಂದು ಭಾರತದ ವಾಯು ಗಡೆ ದಾಟಿ ಬಂದಿತ್ತು. ಪಾಕ್‌ ನ ಒಂದು ಯುದ್ಧ ವಿಮಾನ ಅಂದರೆ ಎಫ್ ೧೬ ಯುದ್ಧ ವಿಮಾನವನ್ನು ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಮಿಗ್ ೨೧ ಯುದ್ಧ ವಿಮಾನದ ಮೂಲಕ ಹೊಡೆದು ಉರುಳಿ ಬಿಟ್ಟಿದ್ದ.


ಆದರೆ ಪಾಕ್‌ ಸೈನ್ಯದ ಕೈಯಲ್ಲಿ ಸೆರೆ ಸಿಕ್ಕಿದ್ದರು. ಇವರು ಪಾಕ್‌ ನೆಲದಲ್ಲಿ ಹೋಗಿ ಬಿದ್ದಿದ್ದರು. ಆಗ ಅಲ್ಲಿನ ಜನರು ಇವರನ್ನು ಹೊಡೆಯಕೆ ಬಂದಾಗ ಜೀವ ಉಳಿಸಿಕೊಳ್ಳುವ ಸಲುವಾಗ ಹಿಂಬದಿಯಲ್ಲಿಯೇ ಓಡಿದ್ದರು. ನಂತರ ಪಾಕ್‌ ಸೈನ್ಯದವರು ಬಂದು ಅಭಿನಂದನ್ ಅವರನ್ನು ವಶಕ್ಕೆ ಪಡೆದಿದ್ದರು. ನಂತರ ಒತ್ತಡದಕ್ಕೆ ಮಣಿದ ಪಾಕ್ ಸರ್ಕಾರ ಅಭಿನಂದನ್ ಅವರನ್ನು ಮಾರ್ಚ್ ೧ ರ ರಾತ್ರಿ ಬಿಡುಗಡೆ ಮಾಡಿತ್ತು.

 

ಇದೀಗ ಅಭಿನಂದನ್ ಅವರು ವಿಶ್ರಾಂತಿ ಪಡೆದುಕೊಂಡು ಮರಳಿ ಸೇನೆಗೆ ಸೇರುವ ಅವಕಾಶ ಪಡೆದುಕೊಂಡಿದ್ದಾರೆ. ಈ ನಡುವೆ ಅವರಿಗೆ ವೀರ ಚಕ್ರ ಘೋಷಣೆ ಆಗಿರುವುದು ದೇಶದ ಜನರಿಗೆ ಸಂತಸ ತಂದಿದೆ.


Find Out More:

Related Articles: