ಬೆಂಗಳೂರಿಗರಿಗೆ ಶಾಕ್ ನೀಡಿದ ಗೃಹಸಚಿವ!
ಬೆಂಗಳುರಿಗರಿಗೆ ಇದೀಗ ಶಾಕಿಂಗ್ ಸುದ್ದಿ ಎದುರಾಗಿದೆ. ಈ ಸುದ್ದಿ ನೀಡಿದವರು ಗೃಹ ಸಚಿವರು. ಹೌದು, ಕೆಆರ್ಎಸ್ ಡ್ಯಾಮ್ ನಲ್ಲಿ ಈಗಾಗಲೇ 80 ಅಡಿ ನೀರು ಇದೆ. ಇದು ತುಂಬ ಕಡಿಮೆ ಪ್ರಮಾಣ. ಹೀಗಾಗಿ ಇನ್ನು ಒಂದು ತಿಂಗಳು ಮಾತ್ರ ಬೆಂಗಳೂರಿಗೆ ಕುಡಿಯುವ ನೀರು ಪೂರೈಸೋಕೆ ಸಾಧ್ಯ ಎಂದಿದ್ದಾರೆ. ಒಂದು ವೇಳೆ ಮಳೆ ಬರದೇ ಇದ್ದಲ್ಲಿ ಬೆಂಗಳೂರಿಗೆ ನೀರಿಲ್ಲ ಅನ್ನೋದನ್ನೂ ಡಿಸಿಎಂ ಸ್ಪಷ್ಟಪಡಿಸಿದ್ದಾರೆ.
ಕೇವಲ ಒಂದೇ ತಿಂಗಳು ಮಾತ್ರ ಬೆಂಗಳೂರಿಗೆ ನೀರು ಪೂರೈಸೋಕೆ ಅವಕಾಶ ಇದೆ. ಆದರೆ ಮಳೆ ಬಾರದಿದ್ದರೆ ತುಂಬ ಕಷ್ಟ. ಮಳೆಯನ್ನು ಬಿಟ್ಟರೆ ಬೇರೆ ದಾರಿ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಜೊತೆಗೆ ಮಾನ್ಸೂನ್ ಚುರುಕಾಗಿ ನೀರು ಬರಬೇಕು. ಅಂದಾಗ ಸಮಸ್ಯೆಗೆ ಕಡಿಮೆ ಆಗಬಹುದು ಎಂದಿದ್ದಾರೆ.
ಇನ್ನು ಇರೋದು ಮತ್ತೊಂದು ಮಾರ್ಗ ಎಂದರೆ, ಲಿಂಗನಮಕ್ಕಿ ಜಲಾಶಯದಿಂದ ನೀರು ತರಿಸೋದು. ಇದು ಕೊನೆಯ ಅನಿವಾರ್ಯ ಆಯ್ಕೆ. ಹೀಗಾಗಿ ಇಲ್ಲಿಂದ ನೀರು ತಂದರೆ ಬೆಂಗಳೂರಿಗರಿಗೆ ಅನುಕೂಲವಾಗುತ್ತದೆ. ಈ ಜಲಾಶಯದ ನೀರು ತರುವ ಬಗ್ಗೆ ಡಿಪಿಆರ್ ಮಾಡೋಕೆ ಸೂಚನೆ ನೀಡಲಾಗಿದೆ ಎಂದಿದ್ದಾರೆ..