ಸಿಟಿ ರವಿಯ ಪ್ರಕಾರ ಇಂದಿನ ಹೋರಾಟಗಳು ನಡೆದ್ದು ಯಾರಿಗಾಗಿ ಗೊತ್ತಾ..?

Soma shekhar
ಕೇಂದ್ರ ಸರ್ಕಾರ ಕೃಷಿಮಸೂದೆಗಳನ್ನು ಜರಿಗೊಳಿಸುತ್ತಿರುವುದನ್ನು ಖಂಡಿಸಿ  ಇಡೀ ರಾಜ್ಯವನ್ನು ಬಂದ್ ಮಾಡಿ ಹಲವು ಕೃಷಿ ಸಂಘಟನೆಗಳ ಮುಂದಾಳತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಈ ಬಂದ್ ಕುರಿತು ಸಚಿವ ಸಿಟಿ ರವಿ ಮಾತನಾಡಿದ್ದು, ಈ ಹೋರಾಟ ರೈತರ ಪರವಲ್ಲ ಬದಲಿಗೆ ದಳ್ಳಾಳಿಗಳ ಪರ ಎಂದು ಹೇಳಿದ್ದಾರೆ.

 

ಕಾಂಗ್ರೆಸ್, ಜೆಡಿಎಸ್ ಹೋರಾಟ ರೈತರ ಪರವೆಂದು ಎನಿಸುವುದಿಲ್ಲ. ಅವರ ಹೋರಾಟ ದಲ್ಲಾಳಿಗಳ ಪರ ಹೋರಾಟ ಎಂದು   ಕಾಂಗ್ರೆಸ್ ಜೆಡಿಎಸ್ ವಿರುದ್ದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ. ಈ ದಿನ ಬಂದ್ಗೆ ಜನರೇ ಪ್ರತಿಕ್ರಿಯೇ ನೀಡಿದ್ದು, ಜನರೇ ಬಂದ್ನ್ನು ತಿರಸ್ಕರಿಸಿದ್ದಾರೆ ಎಂದರು. ರೈತರು ನಮ್ಮ ಜತೆಯೇ ಇದ್ದಾರೆ.
 


 
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಾಕಿದ್ದ ಬೇಡಿಕೆಯನ್ನ ಕಳಚುವ ಕೆಲಸ ಎಪಿಎಂಸಿ ಕಾಯ್ದೆ ಮೂಲಕ ಆಗಿದೆ. ರೈತ ದೇಶದಲ್ಲಿ ಎಲ್ಲಿ ಬೇಕಾದರು ತಾವು ಬೆಳೆದ ಬೆಳೆಯನ್ನ ಮಾರಬಹುದು ಎಂಬ ಅನುಮತಿ ಕೊಟ್ಟಿದೆ. ಮೊದಲು ಎಪಿಎಂಸಿಯಲ್ಲೇ ಮಾರಬೇಕು ಎಂದು ಮಾಡಿದ್ದರು. ಈಗ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಬಹುದು. ಎಲ್ಲಿ ಬೆಲೆ ಜಾಸ್ತಿ ಇರುತ್ತೋ ಅಲ್ಲಿಗೆ ಹೋಗಿ ಮಾರುತ್ತಾರೆ. ಅದರಿಂದ ರೈತರ ಶೋಷಣೆ ತಪ್ಪಿದೆ. ಸ್ಫರ್ಧೆ ಬರುತ್ತೆ ಜೊತೆಗೆ ರೈತ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಬರುತ್ತೆ ಎಂದರು.
 


 ಊರಲ್ಲಿ ಒಬ್ಬನೇ ಕೊಳ್ಳುವವನಿದ್ದರೆ ಅವನು ಹೇಳಿದ್ದೇ ದರ. ಆದರೆ, 10 ಜನ ಬಂದರೆ ಸ್ಪರ್ಧೆ ಬರುತ್ತೆ. ಲಾಭ ಬರುತ್ತೆ. ರೈತ ವಿಚಾರಿಸುತ್ತಾನೆ. ಯಾರಿಗೆ ಮಾರಿದರೆ ಲಾಭ ಬರುತ್ತೋ, ಯಾರು ಜಾಸ್ತಿ ರೇಟ್ ಕೊಡುತ್ತಾರೋ ಅವನಿಗೆ ಮಾರುತ್ತಾರೆ ಎಂದು ಸಚಿವರು ತಿಳಿಸಿದರು. ಎಲ್ಲದಕ್ಕೂ ವಿರೋಧ ಮಾಡಬೇಕು. ಬಿಜೆಪಿ- ಪ್ರಧಾನಿ ನರೇಂದ್ರ ಮೋದಿ ವಿರೋಧಿಸಬೇಕು. ಅದಕ್ಕೆ ಮುಖವಾಡ ತೊಟ್ಟಿಕೊಂಡು ಈ ಕೆಲಸ ಮಾಡುತ್ತಾರೆ ಅಷ್ಟೆ. ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದಿದ್ದಾರೆ. ಈಗಿರುವ ಎಪಿಎಂಸಿ ಕಾಯ್ದೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದು ಇದೆ. ಬೆಳೆದಿರುವವನು ರೈತ. ಬೆವರು ಸುರಿಸಿರುವವನು ರೈತ. ಅವನಿಗೆ ಇಷ್ಟ ಬಂದೆಡೆ ಮಾರಾಟ ಮಾಡುತ್ತಾನೆ. ತಿದ್ದುಪಡಿ ಮಾಡಿರುವ ಕಾಯ್ದೆ ದೇಶದಲ್ಲಿ ಎಲ್ಲಿ ಬೇಕಾದರು ಮಾರಬಹುದು. ಈ ಕಾಯ್ದೆ ರೈತನಿಗೆ ಸ್ವತಂತ್ರ ಕೊಟ್ಟಿರುವುದು. ಅವನಿಗೆ ಸಹಾಯ ಮಾಡಿರುವ ಕಾಯ್ದೆ ಇದು ಎಂದಿದ್ದಾರೆ.

 

 

 ಮುಂಚೆ ಮೋಸ ಮಾಡಿರುವ ಕಾಯ್ದೆ ಇತ್ತು. ದಲ್ಲಾಳಿಗಳು ಬಲಿತಿದ್ರು. ಈಗ ರೈತ ಬಲಿಯುತ್ತಾನೆ. ತಾತ್ಕಾಲಿಕವಾಗಿ ಸುಳ್ಳು ಹೇಳಿಕೊಂಡು ತಿರುಗಬಹುದು. ಸತ್ಯ ಏನು ಅಂತ ಮುಂದೆ ಗೊತ್ತಾಗುತ್ತದೆ. ಈ ಬಗ್ಗೆ ನಾವು ಜನಜಾಗೃತಿ ಮೂಡಿಸುತ್ತೇವೆ. ಶೇ. 90 ರಷ್ಟು ರೈತರು ನಮ್ಮ ಜೊತೆ ಇದ್ದಾರೆ. ಅದಕ್ಕೆ ಯಾರೂ ರೈತರು ಬೀದಿಗೆ ಇಳಿದಿಲ್ಲ ಎಂದು ತಿಳಿಸಿದರು.



 ನಾನು ರೈತ ಚಳುವಳಿಯಿಂದ 1983, 84, 85ರವರೆಗೂ ರೈತ ಚಳುವಳಿಯಲ್ಲಿದ್ದು, ಅಲ್ಲಿಂದ ರಾಜಕೀಯ ಜೀವನ ಪ್ರಾರಂಭ ಮಾಡಿವನು ನಾನು. ರೈತರ ತಾಕತ್ತ ಎನು ಅಂತ ನನಗೆ ಗೊತ್ತು. ರೈತರು ಬೀದಿಗೆ ಇಳಿದರೆ ಯಾವ ಸರ್ಕಾರನೂ ಉಳಿಯಲ್ಲ. ಇವರ ಜೊತೆ ಯಾರು ಬೀದಿಗೆ ಇಳಿದವರು. ದಿನಾ ಬಿಜೆಪಿ ವಿರೋಧಿಸುವ ಒಂದು ಸೆಟ್ ಜನ ಮಾತ್ರ ಇಂದು ಬೀದಿಗೆ ಇಳಿದವರು. ಅವರು ದಿನಾ ಬೈಯೋರು. ಚೀನಾ-ಭಾರತ ಯುದ್ಧವಾದರೆ ಭಾರತವನ್ನ ಬೈಯೋರು. ಭಾರತ-ಪಾಕಿಸ್ತಾನ ಜಗಳ ಮಾಡಿದರೆ ಭಾರತವನ್ನೇ ಬೈಯೋರು. ಈ ಜನ ಮಾತ್ರ ಇಂದು ಬೀದಿಗೆ ಇಳಿದವರು. ರೈತರು ನಮ್ಮ ಜೊತೆಯೇ ಇದ್ದಾರೆ ಎಂದಿದ್ದಾರೆ.

Find Out More:

Related Articles: