ಪ್ರಧಾನಿ ಮೋದಿ ಕೊವಿಡ್ ಲಸಿಕೆ ಕುರಿತು ವಿಶ್ವ ಸಂಸ್ಥೆಯಲ್ಲಿ ಹೇಳಿದ್ದೇನು..?

Soma shekhar
ಇಡೀ ಜಗತ್ತು ಎದುರಿಸುತ್ತಿರುವ ಕೊರೊನಾ ವೈರಸ್ ಪಿಡುಗು ನಿಗ್ರಹಕ್ಕಾಗಿ ಭಾರತ ಅಗತ್ಯವಾದ ಎಲ್ಲ ನೆರವು ನೀಡಲಿದೆ ಎಂದು ಪುನರುಚ್ಚರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕೋವಿಡ್-19 ನಿರ್ಮೂಲನೆಗಾಗಿ ಪ್ರಪಂಚದ ಪರಿಶ್ರಮಕ್ಕೆ ಭಾರತದ ಲಸಿಕೆ ದೊಡ್ಡಮಟ್ಟದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.


193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ 75ನೆ ವಾರ್ಷಿಕೋತ್ಸವದ ಪ್ರಯುಕ್ತ ನಿನ್ನೆ ರಾತ್ರಿ ನಡೆದ ಮಹಾವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಭಾರತವು ಅತಿ ಶೀಘ್ರದಲ್ಲೇ ಕೊರೊನಾ ನಿಗ್ರಹಕ್ಕಾಗಿ ಅತ್ಯಂತ ಪರಿಣಾಮಕಾರಿ ಲಸಿಕೆ ಮತ್ತು ಔಷಗಳನ್ನು ಅಭಿವೃದ್ಧಿಗೊಳಿಸಲಿದೆ. ಇದು ಈ ಹೆಮ್ಮಾರಿ ವಿರುದ್ದ ನಿರಂತರ ಹೋರಾಟ ನಡೆಸುತ್ತಿರುವ ವಿಶ್ವಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಹೇಳಿದರು.

ಭಾರತದ ಲಸಿಕೆ ಅಭಿವೃದ್ಧಿ ಈಗ ಅಂತಿಮ ಹಂತದಲ್ಲಿದ್ದು, ಅತಿ ಶೀಘ್ರದಲ್ಲೇ ಅಭಿವೃದ್ಧಿಯಾಗಿ ಸರ್ವರಿಗೂ ಲಭ್ಯವಾಗಲಿವೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಜನತೆಗೆ ಇದರಿಂದ ಪ್ರಯೋಜನವಾಗಲಿದೆ  ಈ ಜಗತ್ತು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಕೊರೊನಾದಿಂದ ತೀವ್ರ ಸಂಕಷ್ಟ, ಸಮಸ್ಯೆಗೆ ಒಳಗಾಗಿ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಈ ಪಿಡುಗಿನ ನಿಗ್ರಹಕ್ಕಾಗಿ ವಿಶ್ವದ ಎಲ್ಲ ದೇಶಗಳೂ ಶ್ರಮಿಸುತ್ತಿವೆ. ಭಾರತವೂ ಸಹ ಈ ಹೋರಾಟದಲ್ಲಿ ಎಲ್ಲ ದೇಶಗಳಿಗೂ ಅಗತ್ಯವಾದ ಸಹಕಾರ ಮತ್ತು ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಭಾರತದ ಕೊರೊನಾ ನಿಗ್ರಹ ಲಸಿಕೆ ಮತ್ತು ಔಷಗಳು ವಿಶ್ವದರ್ಜೆ ಗುಣಮಟ್ಟ ಹೊಂದಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಖರ ಫಲಿತಾಂಶ ನೀಡುವ ಸುರಕ್ಷಿತ ಔಷಯಾಗಲಿದೆ. ಇದು ವಿಶ್ವದ ದೇಶಗಳಿಗೂ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ತಮ್ಮ ಭಾಷಣದಲ್ಲಿ ಎಂದಿನಂತೆ ಭಯೋತ್ಪಾದನೆ ನಿಗ್ರಹವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಮೋದಿ, ಪಾಕಿಸ್ತಾನ ಮತ್ತು ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡವು.


ವಿಶ್ವಸಂಸ್ಥೆ ಸಂತಸ: ಕೊರೊನಾ ವಿರುದ್ಧ ಹೋರಾಡುತ್ತಿರುವ ವಿಶ್ವದ ನೆರವಿಗೆ ಧಾವಿಸಲು ಮೋದಿ ಅವರು ನೀಡಿರುವ ಭರವಸೆಯನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಕೋವಿಡ್ ಪಿಡುಗಿನ ವಿರುದ್ಧ ವಿಶ್ವದ ಹೋರಾಟಕ್ಕೆ ಭಾರತದ ಲಸಿಕೆ ನೆರವಾಗಲಿದೆ ಎಂದು ಮೋದಿ ಆಶ್ವಾಸನೆ ನೀಡಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಮತ್ತು ಸಂತಸದ ಸಂಗತಿ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟರಸ್ ಹೇಳಿದ್ದಾರೆ.

ಭಾರತವು ಕೊರೊನಾ ಹಾವಳಿ ಉಲ್ಬಣಗೊಂಡಾಗಿನಿಂದಲೂ ವಿಶ್ವಸಂಸ್ಥೆ ಮತ್ತು ಇತರ ದೇಶಗಳಿಗೆ ಅಗತ್ಯವಾದ ನೆರವು ನೀಡುತ್ತಲೇ ಬಂದಿದೆ. ಈಗ ಲಸಿಕೆ ಅಭಿವೃದ್ಧಿ ಮತ್ತು ವಿತರಣೆಯಲ್ಲೂ ಭರವಸೆ ನೀಡಿರುವುದು ವಿಶ್ವಸಂಸ್ಥೆಗೆ ಮತ್ತು ಎಲ್ಲ ದೇಶಗಳಿಗೂ ಸಂತೋಷದ ವಿಷಯವಾಗಿದೆ ಎಂದು ಸಂಯುಕ್ತ ರಾಷ್ಟ್ರಗಳ ಮುಖ್ಯಸ್ಥರು ಹೇಳಿದರು.
ಭಾರತದ ಅನೇಕ ಮಿತ್ರ ರಾಷ್ಟ್ರಗಳು ಕೂಡ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸ್ವಾಗತಿಸಿದ್ದು, ತಾನು ಕೂಡ ಈ ನಿಟ್ಟಿನಲ್ಲಿ ಸಾಥ್ ನೀಡುವುದಾಗಿ ವಾಗ್ದಾನ ಮಾಡಿವೆ.

Find Out More:

Related Articles: