ನೊಂದಣಿಗೆ ಸಿದ್ಧವಾಗಿರುವ ರಷ್ಯಾದ ಮತ್ತೊಂದು ಲಸಿಕೆ ಯಾವುದು..?

Soma shekhar
ರಷ್ಯಾ ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ಮುಂಚಿತವಾಗಿ ಕೊರೋನಾ ಔಷಧಿಯನ್ನು ಸಂಶೋಧನೆಯನ್ನು ಮಾಡಿ ಅದರ ಕ್ಲಿನಿಕಲ್ ಟೆಸ್ಟ್ ಗಳನ್ನು ಪೂರ್ಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೆ ಕೆಲವು ರಾಷ್ಟ್ರಗಳು ಈ ಔಷಧಿಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದ ಪರಿಣಾಮವಾಗಿ  ಔಷಧಿಯನ್ನು ಮತ್ತೆ ಕ್ಲಿನಿಕಲ್ ಟೆಸ್ಟೆಗೆ ಒಳಪಡಿಸಲಾಯಿತು. ಆದರೆ  ರಷ್ಯಾ ಈಗ ಮತ್ತೊಂದು  ಔಷಧಿಯ ನೊಂದಣಿ ಮಾಡಿಸುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.




ಹೌದು ರಷ್ಯಾವು ಅಕ್ಟೋಬರ್ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ, ಇಡೀ ವಿಶ್ವದಲ್ಲೇ ಮೊದಲ ಕೊರೊನಾ ಲಸಿಕೆ ನೋಂದಣಿಯನ್ನು ರಷ್ಯಾ ಮಾಡಿತ್ತು. ಅದಕ್ಕೆ ಸ್ಪುಟ್ನಿಕ್ v ಎನ್ನುವ ನಾಮಕರಣವನ್ನೂ ಕೂಡ ಮಾಡಿತ್ತು. ಆದರೆ ಮೂರನೇ ಹಂತದ ಲಸಿಕೆ ಪ್ರಯೋಗಕ್ಕೂ ಮುನ್ನವೇ ಲಸಿಕೆಯನ್ನು ನೋಂದಣಿ ಮಾಡಿರುವುದು ತಪ್ಪು, ಲಸಿಕೆಯ ಬಗ್ಗೆ ಭರವಸೆ ಹೊಂದಲು ಸಾಧ್ಯವಿಲ್ಲ ಎಂದು ಸಾಕಷ್ಟು ರಾಷ್ಟ್ರಗಳು ಅಪಸ್ವರ ಎತ್ತಿದ್ದವು.




ಕೆಲವೇ ವಾರಗಳಲ್ಲಿ ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಸ್ಪುಟ್ನಿಕ್ V ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯಲಿದೆ.ಹಾಗೆಯೇ ಅಕ್ಟೋಬರ್ 15 ರವೇಳೆಗೆ ಮತ್ತೊಂದು ಲಸಿಕೆಯನ್ನು ನೋಂದಣಿ ಮಾಡುತ್ತಿರುವುದು ಸಂತಸಕ್ಕೆ ಕಾರಣವಾಗಿದೆ.



 

ಲಸಿಕೆ ಅಭಿವೃದ್ಧಿಪಡಿಸುತ್ತಿರುವವರು ಯಾರು?



ಕೊರೊನಾ ಲಸಿಕೆಯನ್ನು ಸೈಬೇರಿಯಾದ ವೆಕ್ಟರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿದೆ. ಕಳೆದ ವಾರ ಮೊದಲನೇ ಹಂತದ ಮಾನವನ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ. ವಿಕ್ಟರ್ ಲಸಿಕೆಯ ಪ್ರಯೋಗವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಸಲಾಗಿತ್ತು, ಈ ಲಸಿಕೆಯಿಂದ ಮಾನವನ ದೇಹದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂಬುದು ತಿಳಿದುಬಂದಿದೆ.




ಕೊರೊನಾ ತಡೆಗಟ್ಟುವ ಉದ್ದೇಶದಿಂದ ರಷ್ಯಾ ಸಿದ್ದಪಡಿಸಿರುವ ಸ್ಪುಟ್ನಿಕ್‌ ವಿ ಎಂಬ ಲಸಿಕೆ ಬಗ್ಗೆ ವೈದ್ಯಕೀಯ ಪರಿಣಿತರ ಅನುಮಾನಗಳು ವ್ಯಕ್ತಪಡಿಸಿರುವ ಮಧ್ಯೆಯೇ ಪ್ರಯೋಗಕ್ಕೆ ಒಳಗಾಗಿರುವ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ. ಈ ಬಗ್ಗೆ ರಷ್ಯಾದ ಆರೋಗ್ಯ ಸಚಿವ ಮಿಖೈಲ್‌ ಮುರಷ್ಕೊ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲಸಿಕೆ ಪಡೆದುಕೊಂಡ ಸ್ವಯಂ ಸೇವಕರಲ್ಲಿ ಏಳು ಜನರ ಪೈಕಿ ಒಬ್ಬರಿಗೆ 24 ಗಂಟೆಯೊಳಗೆ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ. ಅಂದಾಜು ಶೇ 14ರಷ್ಟು ಜನರಲ್ಲಿ ಸುಸ್ತು, 24 ಗಂಟೆಗಳ ವರೆಗೂ ಮಾಂಸಖಂಡಗಳಲ್ಲಿ ನೋವು ಹಾಗೂ ದೇಹದ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



ಇನ್ನು 40,000 ಜನರ ಪೈಕಿ ಈವರೆಗೂ 300 ಮಂದಿಗೆ ಸ್ಪುಟ್ನಿಕ್‌ ವಿ ಲಸಿಕೆ ನೀಡಿರುವುದಾಗಿ ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಂದು ಬಾರಿ ಲಸಿಕೆ ಪಡೆದಿರುವವರಿಗೆ 21 ದಿನಗಳ ಒಳಗಾಗಿ ಮತ್ತೊಂದು ಡೋಸ್ ಸ್ಪುಟ್ನಿಕ್‌ ವಿ ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು. ಅಲ್ಲದೇ ಅಡ್ಡಪರಿಣಾಮ ಕಂಡು ಬಂದರು ಅದಷ್ಟು ಗಂಭಿರವಾದುದು ಅಲ್ಲ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Find Out More:

Related Articles: