ಆಕ್ಸ್ ಫರ್ಡ್ ವಿವಿಯಿಂದ ಆರು ವಾರಗಳಲ್ಲೇ ಬರುತ್ತಂತೆ ಕೊರೋನಾ ಔಷಧಿ..!!

Soma shekhar
ಕೊರೋನಾ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿ ಸಮಸ್ತ ಮಾನವ ಸಂಕುಲವನ್ನು ತಲ್ಲಣಗೊಳಿಸಿದ್ದ ಈ ಒಂದು ವೈರಸ್ ಅತ್ಯಂತ ವೇಗವಾಗಿ ಪ್ರಪಂಚದ ಮೂಲೆಯನ್ನು ತಲುಪಿ ತನ್ನ ಪ್ರತಾಪವನ್ನು ತೋರಿತ್ತು. ಇದರಿಂದಾಗಿ ಲಕ್ಷಾಂತರ ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಈರೀತಿ ಮಾನವನಿಗೆ ಯಮ ಸ್ವರೂಪಿಯಾಗಿರುವ ಕೊರೋನಾ ವೈರಸ್ ಗೆ ಮದ್ದನ್ನು ಸಂಶೋಧಿಸಲು ಎಲ್ಲಾ ರಾಷ್ಟ್ರಗಳು ತಮ್ಮನ್ನು ತಾವು ತೊಡಗಿಸಿಕೊಂಡು ಹಲವು ಔಷಧಿಗಳನ್ನು ತಯಾರಿಸಿ ಕ್ಲಿನಿಕಲ್ ಟ್ರಯಲ್ ಗಳನ್ನು ಹಲವು ತಿಂಗಳಿಂದ ಮಾಡುತ್ತಲೇ ಇವೆ ಆದರೆ ಇಂಗ್ಲೆಂಡ್ನ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಹಾಗೂ  ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಕೇವಲ ಆರುವಾರಗಳಲ್ಲಿ ಕೊರೋನಾ ಸೋಂಕಿಗೆ ಔಷಧಿಯನ್ನು ಸಂಶೋಧಿಸುತ್ತಾರಂತೆ..ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧ ಹೋರಾಡುವ ಹೊಸ ಭರವಸೆ ಹುಟ್ಟುಹಾಕುತ್ತಿರುವ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಮತ್ತು ಲಂಡನ್‍ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಕೇವಲ ಆರು ವಾರಗಳಲ್ಲಿ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದು ಯುಕೆ ಮೂಲದ ಮಾಧ್ಯಮ ವರದಿ ಮಾಡಿದೆ.ಆರು ವಾರಗಳಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದೇವೆ. ಆಶಾದಾಯಕವಾಗಿ ಈ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಗತ್ತಿಗೆ ಸಹಕಾರಿಯಾಗಲಿದೆ ಎಂದು ವರದಿ ಮಾಡಲಾಗಿದೆ. ಇನ್ನು ಬ್ರಿಟನ್ನಲ್ಲಿ ಚಳಿಗಾಲದ ಸಂದರ್ಭದಲ್ಲಿ ಉಂಟಾಗುವ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಸೂಚನೆಯನ್ನು ಹಿಂದೆಯೇ ನೀಡಿತ್ತು.ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಈ ಸಂಶೋಧನೆಗೆ ಮುಂದಾಗುತ್ತಿದ್ದು, 6 ವಾರಗಳಲ್ಲಿ ಲಸಿಕೆ ಅಭಿವೃದ್ಧಿಯಾಗುವ ಭರವಸೆಯಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಯುಕೆ ವ್ಯಾಕ್ಸಿನ್ ಟಾಸ್ಕ್ ಫೋರ್ಸ್‍ನ ಮುಖ್ಯಸ್ಥ ಕೇಟ್ ಬಿಂಗ್ಹ್ಯಾಮ್, ಲಸಿಕೆ ಬಗ್ಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅದರ ಅಭಿವೃದ್ಧಿಯತ್ತ ಕೆಲಸ ಮಾಡುವುದನ್ನು ಮುಂದುವರೆಸಬೇಕಾಗಿದೆ. ಆದರೆ ಶೀಘ್ರದಲ್ಲೇ ತರಬೇಕು ಎಂದು ಒತ್ತಡ ಹೇರಬೇಡಿ ಎಂದಿದ್ದಾರೆ.ಎರಡು ತಿಂಗಳಲ್ಲಿ ಈ ಲಸಿಕೆ ಅಭಿವೃದ್ಧಿಗೊಂಡರೆ ಮುಂದಿನ ವರ್ಷ ಅಂದರೆ 2021ರಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಲು ಅನುವು ಮಾಡಿಕೊಡುತ್ತದೆ. ಕೊರೊನಾ ವಿರುದ್ಧ ಹೋರಾಡಲು ಜಗತ್ತಿಗೆ ಸಹಕಾರಿಯಾಗಲಿದೆ.ಅಗತ್ಯ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸಿದರೆ, ಕೊರೊನಾ ವೈರಸ್ ಲಸಿಕೆಯನ್ನು ಸಂಪೂರ್ಣ ಪರವಾನಗಿ ಪಡೆಯುವ ಮೊದಲು ತುರ್ತು ಬಳಕೆಗೆ ಅನುಮತಿಸಲು ಬ್ರಿಟನ್ ತನ್ನ ಕಾನೂನುಗಳನ್ನು ಪರಿಷ್ಕರಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Find Out More:

Related Articles: