ಅಮೇರಿಕಾದ ಪ್ರೊಫೆಸರ್ ಒಬ್ಬರ ಜೊತೆ ರಾಹುಲ್ ಗಾಂಧಿ ಚರ್ಚಿಸಿದ ವಿಷಯಗಳು ಏನು ಗೊತ್ತಾ..?

Soma shekhar

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೋನಾ ಸೋಂಕು ಹಾಗೂ ಇದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳು ಹೀಗೆ ಹಾಗೂ ಲಾಕ್ ಡೌನ್ ಇಂದಾಗಿರುವ ಪರಿನಾಮಗಳು  ಹೀಗೆ ನಾನಾ   ವಿಷಯಗಳ ಬಗ್ಗೆ ಚರ್ಚೆಯನ್ನು ಪ್ರಪಂಚದ ವಿವಿಧ ಕ್ಷೇತ್ರಗಳ ಪರಿಣತರೊಂದಿಗೆ ಚರ್ಚೆಯನ್ನು ನಡೆಸುತ್ತಲೇ ಇರುತ್ತಾರೆ. ಅದೇ ರೀತಿ ಇಂದೂ ಕೂಡ ಅಮೇರಿಕಾದ ಪ್ರೊಫೆಸರ್ ರೊಬ್ಬರ  ಜೊತೆ ಮಾತನಾಡಿ ಭಾರತ ಹಾಗೂ ಅಮೇರಿಕಾದಲ್ಲಿನ ಸಹಿಷ್ಟಣತೆಯ ಬಗ್ಗೆ  ಮಾತನಾಡಿದ್ದಾರೆ,

 

ಹೌದು ಸಹಿಷ್ಣುತೆ ಭಾರತ ಮತ್ತು ಅಮೆರಿಕ ನಡುವಿನ ಸಹಭಾಗಿತ್ವವನ್ನು ನಿರೂಪಿಸಿತ್ತು,ಆದರೆ ಇಂದು ಉಭಯ ದೇಶಗಳು ಸಹಿಷ್ಣುತೆಯ ಡಿಎನ್‌ಎ ಅನ್ನು ಕಳೆದುಕೊಂಡಿವೆ ಎಂದು ಶುಕ್ರವಾರ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಬದಲಿಗೆ ಉಭಯ ದೇಶಗಳ ನಡುವಿನ ಬಾಂಧವ್ಯ ಅತ್ಯಂತ ವ್ಯಾವಹಾರಿಕ ಮತ್ತು ಪ್ರಾಸಂಗಿಕವಾಗಿರುವಂತೆ ಕಂಡು ಬರುತ್ತಿದೆ ಎಂದರು.

 

ಅಮೆರಿಕದ ಮಾಜಿ ರಾಜತಾಂತ್ರಿಕ ಹಾಗೂ ಹಾಲಿ ಹಾರ್ವರ್ಡ್‌ನ ಜಾನ್ ಎಫ್.ಕೆನೆಡಿ ಸ್ಕೂಲ್ ಆಫ್ ಗವರ್ನಮೆಂಟ್‌ನಲ್ಲಿ ಪ್ರೊಫೆಸರ್ ಆಗಿರುವ ನಿಕೋಲಸ್ ಬರ್ನ್ಸ್ ಅವರ ಜೊತೆ ಕೊರೋನ ಬಿಕ್ಕಟ್ಟು ಹೇಗೆ ಜಗತ್ತನ್ನು ಮರುರೂಪಿಸುತ್ತಿದೆ ಎಂಬ ಕುರಿತು ವೀಡಿಯೊ ಸಂವಾದದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಾಹುಲ್,ಐತಿಹಾಸಿಕವಾಗಿ ಅಮೆರಿಕದೊಂದಿಗೆ ಭಾರತದ ಸಂಬಂಧವು ಯಾವಾಗಲೂ ಶಿಕ್ಷಣ,ರಕ್ಷಣೆ ಮತ್ತು ಆರೋಗ್ಯದಂತಹ ಹಲವಾರು ಕ್ಷೇತ್ರಗಳಿಗೆ ಆದ್ಯತೆ ನೀಡಿತ್ತು. ಆದರೆ ಈಗ ಈ ಸಂಬಂಧವು ಕೇವಲ ರಕ್ಷಣೆಗೆ ಸೀಮಿತವಾಗಿದೆ ಎಂದು ಹೇಳಿದರು.

 

'ಹೊಸ ಚಿಂತನೆಗಳನ್ನು ನಾವು ಒಪ್ಪಿಕೊಳ್ಳಬೇಕು,ನಾವು ಮುಕ್ತವಾಗಿರಬೇಕು. ಆದರೆ ಅಚ್ಚರಿಯ ವಿಷಯವೆಂದರೆ ಆ ಮುಕ್ತ ಡಿಎನ್‌ಎ ಈಗ ಮಾಯವಾಗುತ್ತಿದೆ.ನಾನು ಈ ಮಾತನ್ನು ದುಃಖದಿಂದ ಹೇಳುತ್ತಿದ್ದೇನೆ,ಏಕೆಂದರೆ ಹಿಂದೆ ನಾನು ಕಂಡಿದ್ದ ಮಟ್ಟದ ಸಹಿಷ್ಣುತೆ ಈಗ ಕಾಣುತ್ತಿಲ್ಲ. ಅದು ಅಮೆರಿಕದಲ್ಲಿ ಅಥವಾ ಭಾರತದಲ್ಲಿ ನನಗೆ ಕಂಡು ಬರುತ್ತಿಲ್ಲ ' ಎಂದರು.

 

ಭಾರತದಲ್ಲಿ ಕೊರೋನ ವೈರಸ್ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿಗಾಗಿ ಕೇಂದ್ರವನ್ನು ಟೀಕಿಸಿದ ರಾಹುಲ್,ಅದು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

 

ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ರೂಪಿಸುವಲ್ಲಿ ಆ ದೇಶದಲ್ಲಿಯ ಭಾರತೀಯ ಸಮುದಾಯದ ಪಾತ್ರದಿಂದ ಹಿಡಿದು ಅಮೆರಿಕ-ಚೀನಾ ನಡುವಿನ ಉದ್ವಿಗ್ನತೆಯವರೆಗೆ ಹಲವಾರು ವಿಷಯಗಳನ್ನು ರಾಹುಲ್ ಬನ್ಸ್ ಜೊತೆಗೆ ಚರ್ಚಿಸಿದರು.

ಭಾರತ ಮತ್ತು ಅಮೆರಿಕ ಇತರ ದೇಶಗಳಲ್ಲಿಯ ಸರ್ವಾಧಿಕಾರಿ ಸರಕಾರಗಳಿಂದ ಸವಾಲುಗಳನ್ನು ಎದುರಿಸುತ್ತಿವೆ ಎಂದು ಹೇಳಿದ ಬನ್ಸ್,'ಚೀನಾ ಮತ್ತು ರಷ್ಯಾ ದೇಶಗಳನ್ನು ನಾನು ಈ ಹಿಂದೆಯೇ ಉಲ್ಲೇಖಿಸಿದ್ದೇನೆ. ನಾವೆಂದೂ ಯುದ್ಧವನ್ನು ಬಯಸುವುದಿಲ್ಲ,ಆದರೆ ನಮ್ಮ ಜೀವನ ವಿಧಾನವನ್ನು ಮತ್ತು ವಿಶ್ವದಲ್ಲಿ ನಮ್ಮ ಸ್ಥಾನಗಳನ್ನು ಸಂರಕ್ಷಿಸಿಕೊಳ್ಳಲು ನಾವು ಬಯಸಿದ್ದೇವೆ ' ಎಂದರು

. ಭಾರತ ಮತ್ತು ಅಮೆರಿಕ ವಿಶ್ವದಲ್ಲಿ ಮಾನವ ಸ್ವಾತಂತ್ರ,ಪ್ರಜಾಪ್ರಭುತ್ವ ಮತ್ತು ಜನರ ಆಡಳಿತವನ್ನು ಉತ್ತೆೇಜಿಸಲು ಶಕ್ತಿಗಳನ್ನು ಒಗ್ಗೂಡಿಸಬೇಕು ಎಂದರು.

 

Find Out More:

Related Articles: