ಲಂಡನ್ ಗೆ ಹೊರಟರು ಶಿವರಾಜ್ ಕುಮಾರ್

somashekhar
ನಟ ಶಿವರಾಜ್ ಕುಮಾರ ಇದೀಗ ನಟನೆಯಿಂದ ಕೆಲವು ಸಮಯ ಬ್ರೇಕ್ ತೆಗೆದುಕೊಂಡಿದ್ದಾರೆ. ಹೌದು ಅವರಿಗೆ ಸುಮಾರು ತಿಂಗಳಿನಿಂದ ಕಾಡುತ್ತಿದ್ದ ಭುಜದ ನೋವಿನ ಶಸ್ತ್ರಚಿಕಿತ್ಸೆಗಾಗಿ ಇಂದು ಬೆಳಿಗ್ಗೆ ಲಂಡನ್ ವಿಮಾನ ಏರಿದ್ದಾರೆ. ಹ್ಯಾಟ್ರಿಕ್ ಹೀರೋ ಜೊತೆಗೆ ಪತ್ನಿ ಗೀತಾ ಕೂಡ ಪ್ರಯಾಣ ಬೆಳೆಸಿದ್ದಾರೆ. 


ಈ ಹಿಂದೆ ಒಮ್ಮೆ ಲಂಡನ್ ಗೆ ಹೋದಾಗ ವಾಕ್ ಮಾಡುವಾಗ ಅವರು ಬಿದ್ದಿದ್ದರು. ಆಗ ಅವರ ಬುಜಕ್ಕೆ ಬಲವಾಗಿ ಏಟು ಬಿದ್ದಿತ್ತು. ಹೀಗಾಗಿ ಲಂಡನ್ ನಲ್ಲಿಯೇ ಚಿಕಿತ್ಸೆ ಪಡೆಸಿದ್ದರು. ಇದೀಗ ಮತ್ತೊಮ್ಮೆ ಲಂಡನ್ ಗೆ ಹೋಗುತ್ತಿರುವ ಅವರು, ಶಸ್ತ್ರ ಚಿಕಿತ್ಸೆ ಬಳಿಕ ಕೆಲವು ಕಾಲ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ. 



ಇನ್ನು ಅಭಿಮಾನಿಗಳಿಗೆ ಬೇಸರದ ವಿಷ್ಯ ಏನಪ್ಪ ಅಂದರೆ, ಈ ಬಾರಿ ಲಂಡನ್ ನಲ್ಲಿರುವ ಕಾರಣ ಶಿವರಾಜ್ ಕುಮಾರ್ ಅವರು ಬರ್ತ್ ಡೇ ಆಚರಿಸಿಕೊಳ್ಳಲ್ಲ. ಹೀಗಾಗಿ ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಬೆಳಿಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ವಿ ಲವ್ ಯೂ ಶಿವಣ್ಣ ಎಂದು ಬೀಳ್ಕೊಟ್ಟಿದ್ದಾರೆ.



Find Out More:

Related Articles: