ಅಂತೂ ಫಿಕ್ಸ್ ಆಯ್ತು ಕೆಜಿಎಫ್ ಚಾಪ್ಟರ್-2 ರಿಲೀಸ್ ಡೇಟ್

frame ಅಂತೂ ಫಿಕ್ಸ್ ಆಯ್ತು ಕೆಜಿಎಫ್ ಚಾಪ್ಟರ್-2 ರಿಲೀಸ್ ಡೇಟ್

Soma shekhar

ಕೆಜಿಎಫ್ ಚಿತ್ರ ಬಿಡುಗಡೆ ಆಗುವ ಮೊದಲು ಯಶ್ ಹೆಸರು ಸ್ಯಾಂಡಲ್ ವುಡ್ ಆಚೆಗೆ ಅಷ್ಟೇನೂ ಚಿರಪರಿಚಿತ ಆಗಿರಲಿಲ್ಲ. ಆದರೆ ಕೆಜಿಎಫ್ ಚಿತ್ರ ಬಿಡುಗಡೆ ಆದ ಮೇಲಂತೂ ಯಶ್ ಹೆಸರು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತು. ಅದರಲ್ಲೂ ಪ್ರಶಾಂತ್ ನೀಲ್ ಅವರ ಪ್ರತಿಭೆಯೂ ಈ ಒಂದೇ ಚಿತ್ರದ ಮೂಲಕ ಇಡೀ ಜಗತ್ತಿಗೆ ಪರಿಚಯ ಆಗಿತ್ತು. ಯಶ್ ಇದ್ದಕ್ಕಿದ್ದಂತೆಯೇ ಆಕಾಶದೆತ್ತರಕ್ಕೆ ಬೆಳೆದು ನಿಂತರು ಇದಕ್ಕೆಲ್ಲ ಕಾರಣವಾಗಿದ್ದು ಬೇರೆ ಏನೂ ಅಲ್ಲ ಅದೇ ಕೆಜಿಎಫ್ ಸಿನಿಮಾ. ಇದೀಗ ಚಾಪ್ಟರ್ 2ರ ಬಗ್ಗೆ ಬಿಸಿ ಬಿಸಿ ಸುದ್ದಿ ಹೊರಬಿದ್ದಿದೆ. 

 

ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ ಅವರು ನಾಯಕ ನಟರಾಗಿರುವ ಈ ಸಿನಿಮಾ ಇನ್ನೇನು ಅಕ್ಟೋಬರ್ 23ಕ್ಕೆ ಬಿಡುಗಡೆ ಆಗಲಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಈ ಚಿತ್ರದ ಮೊದಲ ಅಧ್ಯಾಯ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿರುವುದು ಎಲ್ಲ ಅಭಿಮಾನಿಗಳ ಕುತೂಹಲವನ್ನು ತಣಿಸಿಎ. 

 

ಎಲ್ಲೆಲ್ಲಿ ಶೂಟಿಂಗ್?

 

ಹೈದರಾಬಾದ್, ಬೆಂಗಳೂರು, ಬಳ್ಳಾರಿ ಹಾಗೂ ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಇದೀಗ ಚಿತ್ರತಂಡವು ಪೋಸ್ಟ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಒಟ್ಟಾರೆ 100 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಟೀಸರ್ ಹಾಗೂ ಟ್ರೇಲರ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. 

 

ಯಾರೆಲ್ಲ‌ ಇದ್ದಾರೆ? 

 

ಇನ್ನು ಕೆಜಿಎಫ್ ಚಾಪ್ಟರ್ 2 ರಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಬಾಲಿವುಡ್ ನಟಿ ರವೀನಾ ಟಂಡನ್ ಅವರು ರಮಿಕಾ ಸೇನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಶ್ರೀನಿಧಿ ಶೆಟ್ಟಿ ಅವರಿಗೆ ಯಶ್ ಜೋಡಿ ಆಗಿದ್ದಾರೆ. ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಗೌಡ ಅವರ ಛಾಯಾಗ್ರಹಣ ಇದೆ ಮತ್ತು ಹೊಂಬಾಳೆ ಫಿಲ್ಮ ಅಡಿಯಲ್ಲಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. 

 

ಚಿತ್ರದ ಬಿಡುಗಡೆ ಕುರಿತು ಯಶ್ ಕೂಡ ಟ್ವೀಟ್ ಮಾಡಿದ್ದಾರೆ. ಕೆಜಿಎಫ್ ಸಾಮ್ರಾಜ್ಯದ ದ್ವಾರ ಅಕ್ಟೋಬರ್ 23 ರಂದು ನಿಮ್ಮೆಲ್ಲರಿಗೂ ತೆರೆಯಲಿದೆ. ಅಂದು ಏಕಕಾಲದಲ್ಲಿ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಎಂದಿದ್ದಾರೆ.

Find Out More:

Related Articles:

Unable to Load More