ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಬಿಗ್ ಹಿಟ್ ಮತ್ತು ಮುನ್ನುಗ್ಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಕಲೆಕ್ಷನ್ ನಲ್ಲಿಯೂ ಕೂಡ ಭಾರೀ ಮುಂದಿದೆ. ಉದ್ದ ಜಾಸ್ತಿಯಾಯ್ತು, ಕಾಮಿಡಿ ಕಮ್ಮಿಯಾಯ್ತು ಮುಂತಾದ ಟೀಕೆಗಳನ್ನು ಎದುರಿಸಿ ನಿಂತಿರುವ ಚಿತ್ರ ಗಳಿಕೆಯಲ್ಲಿಯೂ ಭರ್ಜರಿ ಸೌಂಡ್ ಮಾಡ್ತಿದೆ. ಹಾಗಾದರೆ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ.
ಬೆಂಗಳೂರಿನ ಗಾಂಧೀನಗರದ ಮೂಲಗಳ ಪ್ರಕಾರ 450 ಸ್ಕ್ರೀನ್‌ಗಳಲ್ಲಿ, ಮೂರು ದಿನಗಳಲ್ಲಿ ಐದು ಸಾವಿರ ಷೋ ಕಂಡಿರುವ ಚಿತ್ರದ ಗಳಿಕೆ ಅದಕ್ಕಿಂತ ಕಡಿಮೆ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಷೋಗಳ ಸಂಖ್ಯೆಯನ್ನು ಪುಷ್ಕರ್ ಕೂಡ ಹೌದೆನ್ನುತ್ತಾರೆ. ಒಂದು ವಾರದ ಗಳಿಕೆ 50-60 ಕೋಟಿ ಬರಬಹುದು. ನಿರ್ಮಾಪಕರ ಪಾಲು 30 ಕೋಟಿ ಬಂದೇ ಬರುವುದು ಖಾತ್ರಿ.
ರಾಜ್ಯದ ಐವತ್ತು ಕೇಂದ್ರಗಳಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಷೋಗಳಿಗೂ ಟಿಕೆಟ್ ಇಟ್ಟಿದ್ದರು. ಅದರಿಂದಲೇ 3-4 ಕೋಟಿಗಳಿಕೆಯಾಗಿದೆ. ಎರಡನೇ ವಾರದಲ್ಲಿ 80 ಹೆಚ್ಚುವರಿ ಕೇಂದ್ರಗಳಲ್ಲಿ ಚಿತ್ರ ತೆರೆಕಾಣಲಿದೆ. ಎರಡು ವಾರದ ಗಳಿಕೆ 100 ಕೋಟಿ ಮುಟ್ಟಲಿದೆ. ಓವರ್ ಸೀಸ್ ಕೇಂದ್ರಗಳಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿದೆ. 15 ಕೇಂದ್ರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ತೆಲುಗಿನಲ್ಲಿ 36 ಸಾವಿರ ಟಿಕೆಟ್ ಮುಂಗಡ ಬುಕಿಂಗ್ ಆಗಿದೆ- ಹೀಗೆ ಶ್ರೀಮನ್ನಾರಾಯಣನ ಮಹಿಮೆ ಹೆಚ್ಚಾಗುತ್ತಿದೆ. ಈಗಾಗಲೇ 50ಕೋಟಿಯತ್ತ ಮುನ್ನುಗ್ಗುತ್ತಿದೆ.
ಕನ್ನಡಕ್ಕೆ ಫ್ಯಾಂಟಸಿ ಕತೆಗಳನ್ನು ಹೇಳಬೇಕು, ಒಂದು ಸಿನಿಮಾ ಹೀಗೇ ಇರಬೇಕೆಂಬ ಸಿದ್ದಸೂತ್ರಗಳನ್ನು ಮುರಿದು ಬೇರೊಂದು ಸಿನಿಮಾ ಕಟ್ಟಬೇಕು ಎನ್ನುವ ಉದ್ದೇಶದೊಂದಿಗೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಮಾಡಿದ್ದು. ನಮ್ಮ ಉದ್ದೇಶದ ಗುರಿಯನ್ನು ಸಿನಿಮಾ ಬಿಡುಗಡೆಯಾದ ಮರು ದಿನವೇ ಮುಟ್ಟಿದ್ದೇವೆ. ಒಂದು ಚಿತ್ರದ ಬಗ್ಗೆ ಎಲ್ಲ ರೀತಿಯಲ್ಲೂ, ಎಲ್ಲ ಕೋನಗಳಲ್ಲೂ ಮಾತನಾಡುತ್ತಿದ್ದಾರೆ ಅಂದರೆ ಅದು ಸಿನಿಮಾದ ನಿಜವಾದ ಗೆಲುವು. ಅಂಥ ಗೆಲುವಿನ ಚಿತ್ರ ಕೊಟ್ಟಿದ್ದಕ್ಕೆ ಒಬ್ಬ ನಿರ್ಮಾಪಕನಾಗಿ ನನಗೆ ಹೆಮ್ಮೆ ಇದೆ.’ ಅಂತಾರೆ ಪುಷ್ಕರ್.ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲೂ ನಿರೀಕ್ಷೆ ಶುರುವಾಗಿದ್ದು ಕೋಟ್ಯಾಂತರ ರೂಪಾಯಿ ಗಳಿಸುವ ಲೆಕ್ಕಾಚಾರ ದಲ್ಲಿದೆ ಚಿತ್ರತಂಡ.