ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಡೈಲಾಗ್ ಭಾರೀ ಖ್ಯಾತಿ ಪಡೆದಿತ್ತು. ಇದೀಗ ನಿಖಿಲ್ ಕುಮಾರ್ ಸ್ವಾಮಿ ಅವರ ಮುಂದಿನ ಚಿತ್ರಕ್ಕೆ ನಿರ್ದೇಶಕ ಯಾರು ಎಂಬುದು ಬಹುದಿನಗಳ ಗೊಂದಲಕ್ಕೀಗ ಉತ್ತರ ಸಿಕ್ಕಿದೆ ನೋಡಿ.
ವಿಜಯ್ ಕುಮಾರ್ ಕೊಂಡ ಡೈರೆಕ್ಷನ್ ತೆಲುಗಿನ ಸೂಪರ್ ಹಿಟ್ ಸಿನಿಮಾ 'ಗುಂಡೇ ಜಾರಿ ಗಲ್ಲಂತಾಯಿಂದಿ'ಗೆ ನಿರ್ದೇಶನ ಮಾಡಿದ್ದ ವಿಜಯ್ ಕುಮಾರ್ ಕೊಂಡ, ಈಗ ನಿಖಿಲ್‌ಗೆ ಸಿನಿಮಾ ಮಾಡಲಿದ್ದಾರಂತೆ. 2014ರಲ್ಲಿ ತೆರೆಕಂಡ ನಾಗ ಚೈತನ್ಯ-ಪೂಜಾ ಹೆಗ್ಡೆ ಜೋಡಿಯ 'ಒಕ ಲೈಲಾ ಕೋಸಂ' ಸಿನಿಮಾ ಮಾಡಿದ್ದರು ವಿಜಯ್. ಆದಾದ ಮೇಲೆ ಅವರು ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಐದು ವರ್ಷಗಳ ಬಳಿಕ ಈಗ ನಿಖಿಲ್ ಸಿನಿಮಾ ಮಾಡುವ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದಲ್ಲದೆ, ನಿರ್ದೇಶನಕ್ಕೂ ಎಂಟ್ರಿ ಕೊಟ್ಟಿದ್ದಾರೆ.
ನಿಖಿಲ್ ನಟನೆಯ ಮೊದಲ ಸಿನಿಮಾ 'ಜಾಗ್ವಾರ್'ಗೆ ಎಸ್.ಎಸ್. ತಮನ್ ಸಂಗೀತ ನೀಡಿದ್ದರು. 'ಸೀತಾರಾಮ ಕಲ್ಯಾಣ'ಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದರು. ಈ ಸಿನಿಮಾಗೆ ಕನ್ನಡದವರೇ ಆದ ಅರ್ಜುನ್ ಜನ್ಯ ಸಂಗೀತ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಹಾಗಾಗಿ, ನಿಖಿಲ್-ಅರ್ಜುನ್ ಜನ್ಯ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಲಿದೆ. ಚಿತ್ರದ ನಟಿಸಲು ಕಲಾವಿದರಿಗಾಗಿ ಆಡಿಷನ್ ಕರೆದಿದೆ ಚಿತ್ರತಂಡ. 5ರಿಂದ 9 ವರ್ಷ ವಯಸ್ಸಿನ ಮಕ್ಕಳು ಹಾಗೂ 20ರಿಂದ 40 ವರ್ಷ ಒಳಗಿನ ಕಲಾವಿದರು ಸಿನಿಮಾಗೆ ಬೇಕಾಗಿದೆಯಂತೆ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಆಡಿಷನ್‌ಗೆ ಕರೆ ನೀಡಿದೆ. ಆಡಿಷನ್‌ಗೆ ಬರುವವರಿಗೆ ಕನ್ನಡ ಕಡ್ಡಾಯವಾಗಿ ತಿಳಿದಿರಬೇಕು ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಈ ಸಿನಿಮಾಗೆ ಭಾರತದ ಖ್ಯಾತ ಆಡಿಯೋ ಸಂಸ್ಥೆ ಲಹರಿ ಬಂಡವಾಳ ಹೂಡಲಿದೆಯಂತೆ. ಆಡಿಷನ್‌ಗೆ ನೀಡಿರುವ ಜಾಹೀರಾತಿನಲ್ಲೂ ಲಹರಿ ಮ್ಯೂಸಿಕ್ ಅರ್ಪಿಸುವ ಎಂದೇ ಮುದ್ರಿಸಲಾಗಿದೆ. ಹಾಗಾಗಿ, ಲಹರಿ ಸಂಸ್ಥೆಯ ನಿರ್ಮಾಣದ ಸಿನಿಮಾವಿದು ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡದಲ್ಲಿ ಚಿತ್ರೀಕರಣ ಮಾಡಿ, ಆನಂತರ ತೆಲುಗಿಗೆ ಡಬ್ ಮಾಡುವ ಆಲೋಚನೆ ಚಿತ್ರತಂಡಕ್ಕಿದೆಯಂತೆ. ಪೈಲ್ವಾನ್ ಕೃಷ್ಣ ಮಾಡಲಿರುವ ಸಿನಿಮಾದಲ್ಲೂ ನಿಖಿಲ್ ನಟಿಸುವುದು ಪಕ್ಕಾ ಆಗಿದೆ.