ನಟಿ ರಾಧಿಕ ಕುಮಾಸ್ವಾಮಿ ಈಗ ದಮಯಂತಿ

frame ನಟಿ ರಾಧಿಕ ಕುಮಾಸ್ವಾಮಿ ಈಗ ದಮಯಂತಿ

somashekhar
ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾದಿಂದ ದೂರ ಉಳಿದು ಈಗಾಗಲೇ 3 ವರ್ಷಕ್ಕೂ ಹೆಚ್ಚೇ ಕಾಲವಾಯಿತು. ಇದೀಗ ದಮಯಂತಿ ಯಾಕೆ ಆಗಿದ್ದಾಳೆ ಎಂದು ಆಶ್ಚರ್ಯವಾಯಿತಾ. ಆಶ್ಚರ್ಯ ವಾದರೂ ಸರಿ ನಂಬಲೇಬೇಕಾದ ವಿಷಯವಿದು. 
ಏಕೆಂದರೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಬಣ್ಣದ ಲೋಕದಿಂದ ದೂರ ಉಳಿದಿಲ್ಲ. ಕಾಂಟ್ರಾಕ್ಟ್ ದಮಯಂತಿ ಮತ್ತು ಭೈರದೇವಿ ಚಿತ್ರದಲ್ಲಿ ನಟಿಸುತ್ತ ಇದ್ದಾರೆ. ಕೆಲವು ತಿಂಗಳ ಹಿಂದೆ ಸ್ಮಶಾನದಲ್ಲಿ ಭೈರಾದೇವಿ ಸಿನಿಮಾ ಶೂಟಿಂಗ್ ವೇಳೆ ಕೆಳಗೆ ಬಿದ್ದು ಗಾಯಗೊಂಡಿದ್ದರು. ಈಗ ಅವರು ದಮಯಂತಿ ಚಿತ್ರದ ಮೂಲಕ ಜನರಿಗೆ ರಂಜನೆ ನೀಡಲು ಸಜ್ಜಾಗಿದ್ದಾರೆ.

ಶ್ರೀ ಲಕ್ಷ್ಮಿ  ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಡಿ ದಮಯಂತಿ ಸಿನಿಮಾ ನಿರ್ಮಿಸಲಾಗಿದೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವರಸನಾಯಕ ಜಗ್ಗೇಶ್ ಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ ಕನ್ನಡ ಸೇರಿದಂತೆ ಹಿಂದಿ ತಮಿಳು ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗಿರುವು ವಿಶೇಷತೆಯಾಗಿದೆ. ತೆಲುಗಿನಲ್ಲಿ ಬಿಡುಗಡೆಗೊಂಡ ಅರುಂಧತಿ ಮತ್ತು ಭಾಗಮತಿ ಚಿತ್ರಗಳು ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೇ ಅಲ್ವಾ. ಇದೇ ಮಾದರಿಯಲ್ಲಿ ದಮಯಂತಿ ಚಿತ್ರ ನಿರ್ಮಾಣವಾಗಿದೆ. ಪ್ರಸಕ್ತ ಕಾಲಘಟ್ಟದ ಕಥೆಯ ಜೊತೆಗೆ ಐತಿಹಾಸಿಕ ಕಥಾಹಂದರ ಇದರಲ್ಲಿ ಮಿಳಿತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಾರರ್ ತ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಬೆಂಗಳೂರು ಮೈಸೂರು ಹೈದರಾಬಾದನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಆರ್ ಎಸ್ ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ ಛಾಯಾಗ್ರಹಣ ಪಿ ಕೆ ಎಚ್ ದಾಸ್ ಅವರದು 'ಭಜರಂಗಿ' ಲೋಕಿ,ಸಾಧುಕೋಕಿಲ, ತಬಲ ನಾಣಿ, ಮಿತ್ರ, ನವೀನ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ರವಿಗೌಡ, ಬಾಲರಾಜವಾಡಿ, ವೀಣಾ, ಸುಂದರ್ ಕೆಂಪೇಗೌಡ ತಾರಾಗಣದಲ್ಲಿದ್ದಾರೆ.
ಸಾಧುಕೋಕಿಲ ಅವರು ಸ್ಪೆಷಲ್ ಕಾಮಿಡಿ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಕಾಮಿಡಿಯ  ಮಹಾ ಪೂರವೇ ಸಿಗಲಿದೆಯಂತೆ. ಮುಖ್ಯವಾಗಿ ನವರಸ ನಾಯಕ ಜಗ್ಗೇಶ್ ನಿರ್ಮಿಸುತ್ತಿರುವುದು ಇನ್ನೊಂದು ವಿಶೇಷತೆಯಾಗಿದೆ. 


Find Out More:

Related Articles:

Unable to Load More