ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶ!

somashekhar
ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳಿದ್ದರು ರಶ್ಮಿಕಾ ಮಂದಣ್ಣ. ಹೀಗಾಗಿ ಇವರ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. 


ಹೌದು ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮಿಳು ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಆಗ ನನಗೆ ಕನ್ನಡ ಮಾತನಾಡುವುದು ಕಷ್ಟ. ನನಗೆ ಕನ್ನಡ ಮಾತನಾಡೋಕೆ ಬರುವುದಿಲ್ಲ ಎಂದಿದ್ದರು. ಹೀಗೆ ಕನ್ನಡ ಬಾಷೆಯ ಬಗ್ಗೆ ಅಸಡ್ಡೆ ತೋರಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಅವರ ವಿರುದ್ಧ ಕ್ರಮ ಕೈಗೊಳ್ಳೋಕೆ ಒತ್ತಾಯಿಸಿವೆ. 


ಕನ್ನಡ ಮಣ್ಣಿನಲ್ಲೇ ಹುಟ್ಟಿ, ಕನ್ನಡ ಚಿತ್ರರಂಗದಿಂದಲೇ ಉನ್ನತ ಮಟ್ಟಕ್ಕೆ ಏರಿ ಇದೀಗ ಪರಭಾಷೆಗಳಲ್ಲಿ ಅವಕಾಶ ಪಡೆದುಕೊಂಡು ರಶ್ಮಿಕಾ ಮಿಂಚುತ್ತಾ ಇದ್ದಾರೆ. ಆದರೆ ಅವರು ಮಾತೃಭಾಷೆಗೆ ಅಗೌರವ ತೋರಿಸವುತ್ತಿರೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತೊಡಿಸಿದ್ದಾರೆ.


Find Out More:

Related Articles: