ಅಮರ್ ನೆಗೆಟಿವ್ ವಿಮರ್ಶೆ : ಸಿಟ್ಟಾದ ನಿರ್ದೇಶಕ

somashekhar

ದಿವಂಗತ ಅಂಬರೀಶ್ ಅವರ ಪುತ್ರ ನಾಯಕನಾಗಿ ನಟಿಸಿರೋ ಮೊದಲ ಚಿತ್ರ ಅಮರ್. ಕನ್ನಡದ ಪ್ರಮುಖ ನಟರೆಲ್ಲ ಈ ಚಿತ್ರಕ್ಕೆ ಶುಭ ಹಾರೈಸಿದ್ದರು‌. ಜೊತೆಗೆ ರಜನಿಕಾಂತ್ ಅಂಬರೀಶ್ ಅವರ ಗೆಳೆಯನಾಗಿದ್ದರಿಂದ ಅಭಿಷೇಕ ಅವರಿಗೆ ಬೆಸ್ಟ್ ಆಫ್ ಲಕ್ ಹೇಳಿದ್ದರು. 

 

( ನಾಯಕಿ ತಾನ್ಯಾ ಹೋಪ್) 

 

ಹೌದು, ಇಷ್ಟೆಲ್ಲ ಸದ್ದು ಮಾಡಿಕೊಂಡು ಬಿಡುಗಡೆ ಆದ ಅಭಿಷೇಕ ಅವರ 'ಅಮರ' ಚಿತ್ರಕ್ಕೆ ನೆಗೆಟಿವ್ ರಿವ್ಯೂ ಗಳು ಬಂದಿವೆ. ವಿಮರ್ಶೆಗಳು ಖಾರವಾಗಿವೆ. ಹೀಗಾಗಿ ಅಮರ್ ಚಿತ್ರದ ನಿರ್ದೇಶಕ ನಾಗಶೇಖರ್ ಗರಂ ಆಗಿದ್ದಾರೆ. ಇದರ ಜೊತೆಗೆ ತಮ್ಮ ಅನುಭವದ ಮಾತುಗಳನ್ನು ಅವರು ಆಡಿದ್ದಾರೆ.

 

(ನಿರ್ದೇಶಕ ನಾಗಶೇಖರ್)

 

'ನಮ್ಮ ಚಿತ್ರತಂಡ ದೊಡ್ಟ ಅನುಭವ ಹೊಂದಿದೆ. ನಾವು ಸಣ್ಣ ಪುಟ್ಟ ತಪ್ಪುಗಳು ಇರಬಹುದೇ ವಿನಃ ದೊಡ್ಡ ತಪ್ಪುಗಳನ್ನು ನಾವು ಮಾಡಿಲ್ಲ. ನಾನು 25 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇನೆ. ಐದು ಸಿನಿಮಾ ನಿರ್ದೇಶನ ಮಾಡಿದ್ದೇನೆ. ನಾನು ನನ್ನ ಜೀವನದಲ್ಲಿ ಯಾವತ್ತೂ ಕೆಟ್ಟ ಸಿನಿಮಾ ಮಾಡುವುದಿಲ್ಲ. ಮಾಡಿಲ್ಲ' ಎಂದಿದ್ದಾರೆ.

 

(ತಂದೆ ಅಂಬರೀಶ್ ಜೊತೆ ಅಭಿಷೇಕ್)

 

ಖಾರವಾದ ವಿಮರ್ಶೆಯಿಂದ ನೊಂದಿರುವ ನಿರ್ದೇಶಕ ನಾಗಶೇಖರ್ ಅಮರ್ ಸಿನಿಮಾಗೆ ಒಳ್ಳೆಯ ವೆಲ್ಕಮ್ ಸಿಕ್ಕಿದೆ ಎಂದಿದ್ದಾರೆ. ಅಷ್ಟಕ್ಕೂ ನಿರ್ದೇಶಕ ನಾಗಶೇಖರ್ ಇಷ್ಟೊಂದು ಗರಂ ಆಗಲಿಕ್ಕೆ ಕಾರಣ ಏನಂದ್ರೆ, ಈ ಚಿತ್ರ ನೋಡೊಕೆ ಚಿತ್ರ ಮಂದಿರಕ್ಕೆ ಹೋಗಬೇಡಿ ಎಂದು ಬರೆದ ಒಂದು ನೆಗಟಿವ್ ರಿವ್ಯೂ ಕಾರಣ ಅಷ್ಟೇ. 

 

 

 

Find Out More:

Related Articles: