ರಾಜ್ಯದ ಜನತೆಗೆ ವಿದ್ಯುತ್ ಶಾಕ್..?
ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕಾದಿದೆ. ಹೌದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಈ ಶಾಕ್ ಜನತೆಗೆ ತಟ್ಟುವ ಸಾಧ್ಯತೆ ಇದೆ. ಅಷ್ಟಕ್ಕೂ ಆ ಶಾಕ್ ಏನು ಅಂತೀರಾ? ಅದೇ ವಿದ್ಯುತ್ ಬೆಲೆ ಏರಿಕೆ ಬಿಸಿ. ವಿದ್ಯುತ್ ದರ ಏರಿಕೆ ಮಾಡಲು ವಿದ್ಯುತ್ ಸರಬರಾಜು ಕಂಪನಿಗಳು ಈಗಾಗಲೇ ಪ್ರಸ್ತಾವನೆಸಲ್ಲಿಸಿವೆ ಎನ್ನುವ ಮಾಹಿತಿ ದೊರೆತಿದೆ.
ಕಳೆದ ವರ್ಷದ ನವೆಂಬರ್ ನಲ್ಲಿಯೇ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತುಎನ್ನಲಾಗಿದೆ. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿರಲಿಲ್ಲ. ಈಗ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ದರಹೆಚ್ಚಳಕ್ಕೆ ವಿದ್ಯುತ್ ಕಂಪನಿಗಳು ಮತ್ತೆ ಬೇಡಿಕೆ ಇಟ್ಟಿವೆ.
ಕೆ.ಇ.ಆರ್.ಸಿ. ಅನ್ನೋ ಕಂಪನಿ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿದ್ದು, ಈ ಕುರಿತು ಸಿಎಂಗೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. .ಒಂದು ಯೂನಿಟ್ ಗೆ45 ಪೈಸೆಯಿಂದ 50 ಪೈಸೆಯಷ್ಟು ದರ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕುಮಾರಸ್ವಾಮಿಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಚುನಾವಣಾ ಫಲಿತಾಂಶದ ಬಳಿಕ ವಿದ್ಯುತ್ ದರ ಪರಿಷ್ಕರಣೆ ಮಾಡಲಿದ್ದು, ಹೊಸ ದರಗಳು ಇನ್ಮೇಲೆ ಜಾರಿಗೆ ಬರಲಿವೆ. ಒಟ್ಟಿನಲ್ಲಿ ಈಗಾಗಲೇ ದಿನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನರು, ಇದೀಗ ವಿದ್ಯುತ್ ಬೆಲೆ ಏರಿಕೆಯನ್ನೂ ಸುಮ್ಮನೆ ಸಹಿಸಿಕೊಳ್ಳದೇ ಬೇರೆ ವಿಧಿಯಿಲ್ಲ. ವಿದ್ಯುತ್ ದರ ಪರಿಷ್ಕರಣೆ ಯಾವಾಗ ನಡೆಯುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.