ಭಾರತದಲ್ಲಿ ಕೊರೋನಾ ಹರಡಲು ಕಾರಣವಾಗಿದ್ದು ನವದೆಹಲಿಯಲ್ಲಿ ನಡೆದ ಆ ಒಂದು ಸಭೆ
ನವದೆಹಲಿ: ವಿಶ್ವದಾದ್ಯಂತ ಕೊರೋನಾ ವೈರಸ್ ಸೋಂಕು ಬಹಳ ವೇಗವಾಗಿ ವಿಸ್ತರಿಸಿ ಸಾಕಷ್ಟು ಸಾಕಷ್ಟು ಜನರು ಕೊನೆಯುಸಿರೆಳಿದಿದ್ದಾರೆ. ಈ ವೈರಸ್ ಅನ್ನು ತಡೆಯುವ ಉದ್ದೇಶದಿಂದ ಭಾರತದಲ್ಲಿ ಲಾಕ್ ಡೌನ್ ಮಾಡಲಾಗಿದೆ ಆದರೆ ಮಾರ್ಚ್ 1 ರಿಂದ 15ರವರೆಗೆ ದೆಹಲಿಯಲ್ಲಿ ನಡೆದ ಸಭೆಯೊಂದು ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಾಗುವಂತೆ ಮಾಡಿದೆ ಅಷ್ಟಕ್ಕೂ ಆ ಸಭೆ ಯಾವುದು ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್
ಕೊರೋನಾ ನಿಗ್ರಹಕ್ಕೆ ದೇಶದಾದ್ಯಂತ ಲಾಕ್ ಡೌನ್ ಹೇರಿರುವ ನಡುವಲ್ಲೇ ದೆಹಲಿಯ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆ ಇದೀಗ ಇಡೀ ದೇಶಕ್ಕೆ ಕೊರೋನಾ ವೈರಸ್ ಹಬ್ಬಿಸಿರುವ ಆತಂಕ ಹೆಚ್ಚಾಗಿದೆ. ಇದರಂತೆ ತಮಿಳುನಾಡು ರಾಜ್ಯದಲ್ಲಿ ಮಂಗಳವಾರ ಒಂದೇ ದಿನದಲ್ಲಿ ೫೦ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ (ಬಂಗ್ಲೇವಾಲೆ) ಮಸೀದಿಯಲ್ಲಿ ತಬ್ಲೀಘಿ ಜಮಾತ್ ಸಂಘಟನೆ ಮಾರ್ಚ್ 1 ರಿಂದ 15ರವರೆಗೆ ಧಾರ್ಮಿಕ ಸಭೆಯೊಂದನ್ನು ಹಮ್ಮಿಕೊಂಡಿದ್ದು, ಇದರಲ್ಲಿ ದೇಶ ವಿದೇಶಗಳ 8000ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಇವರ ಪೈಕಿ ಕೆಲವರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಗೆ ಆಗಮಿಸಿದ್ದವರನ್ನೆಲ್ಲಾ ಇದೀಗ ಪರೀಕ್ಷೆಗೆ ಗುರಿಪಡಿಸಲಾಗುತ್ತಿದೆ. ಅವರ ಪೈಕಿ ನೂರಾರು ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದಕ್ಕಿಂತ ಆತಂಕಕಾರಿ ವಿಚಾರವೆಂದರೆ ಇದೀಗ ಸೋಂಕು ಪತ್ತೆಯಾದವರು, ಕರ್ನಾಟಕ, ತಮಿಳುನಾಡು, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿದ್ದು, ಅಲ್ಲಿಯೂ ಇನ್ನಷ್ಟು ಜನರಿಗೆ ಸೋಂಕು ಹಬ್ಬಿಸಿರುವ ಭೀತಿ ಎದುರಾಗಿದೆ.
ಕಳೆದ ವಾರ ಸುಮಾರು 1000 ಕ್ಕೂ ಹೆಚ್ಚು ಜನರು ಮೊದಲ ಹಂತದಲ್ಲಿ ತೆರವುಗೊಂಡಿದ್ದು, ಅವರಲ್ಲಿ 6 ಮಂದಿ ತೆಲಂಗಾಣದ ವ್ಯಕ್ತಿಗಳು ಸೋಮವಾರ ಕೊರೋನಾ ವೈರಸ್ ತಗುಲಿ ಮೃತಪಟ್ಟಿದ್ದರು. ಇತ್ತೀಚೆಗೆ ಕರ್ನಾಟಕದ ತುಮಕೂರು ಜಿಲ್ಲೆ ಶಿರಾದ ಒಬ್ಬ ವೃದ್ಧ ಕೂಡ ಇದೇ ಕಾರಣಕ್ಕೆ ಬಲಿಯಾಗಿದ್ದ. ಇದರ ಬೆನ್ನಲ್ಲೇ ಸರ್ಕಾರ ಉಳಿದ 1033 ಜನರನ್ನು ಮಂಗಳವಾರ ತೆರವುಗೊಳಿಸಿದೆ.
ತೆರವುಗೊಳಿಸಿದ 1033 ಮಂದಿಯಲ್ಲಿ 24 ಜನರಲ್ಲೂ ವೈರಸ್ ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದಲ್ಲದೆ, ನಿಜಾಮುದ್ದೀನ್ ಸಂಪರ್ಕಿಸುವ ರಸ್ತೆಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.
ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಆತಂಕಪಟ್ಟಂತೆಯೇ ತಮಿಳುನಾಡು ರಾಜ್ಯದಲ್ಲಿ ಮಂಗಳವಾರ ಒಂದೇ ದಿನದಲ್ಲಿ ೫೦ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ದೆಹಲಿಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ೫೦ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇದರಂತೆ ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ. 124 ಮಂದಿಯಲ್ಲಿ 77 ಮಂದಿ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದವರೇ ಆಗಿದ್ದಾರೆಂಬುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲರಲ್ಲೂ ವೈರಸ್ ದೃಢಪಟ್ಟಿದ್ದು, ಕನ್ಯಾಕುಮಾರಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.