ಜಿಯೋ ಕಂಪನಿಯಲ್ಲಿ ಕೆಲಸ ಕಾಲಿ ಇದೆ ಎಂದು ಜಾಹಿರಾತು ನೋಡಿ ಅರ್ಜಿ ಹಾಕಿಕೊಂಡಿದ್ದವರಿಗೆ ಶಾಕ್..!!

Soma shekhar

ನೀವು ಇತ್ತೀಚೆಗೆ ಒಎಲ್ಎಕ್ಸ್ ನಲ್ಲೋ ಇಲ್ಲೋ ಕ್ವಿಕರ್ ನಲ್ಲೊ ರಿಲಿಯನ್ಸ್ ಟೆಂಟ್ಸ್ ನಲ್ಲೊ ಇಲ್ಲ ಜಿಯೋದಲ್ಲಿ ಉದ್ಯೋಗಗಳು ಕಾಲಿ ಇದೆ ಎಂದು ಜಾಹಿರಾತುಗಳನ್ನು ನೋಡಿ ಅದಕ್ಕೆ ನೀವು ಅರ್ಜಿಯನ್ನು ಹಾಕಿಕೊಂಡಿದ್ದರೆ ನಿವು ಮೂರ್ಕರಾದಿರಿ ಎಂದು ತಿಳಿದು ಕೊಳ್ಳಿ ಯಾಕೆ ಗೊತ್ತಾ…? ಈ ಸುದ್ದಿ ನೋಡಿ.

ರಿಲಯನ್ಸ್ಟ್ರೆಂಡ್ಸ್ಮತ್ತು ಜಿಯೋದಲ್ಲಿ ಉದ್ಯೋಗಾವಕಾಶಗಳಿವೆ ಎಂದು ನಕಲಿ ಜಾಹೀರಾತು ಹಾಕಿದ್ದ ಕಾರಣಕ್ಕೆ ಓಎಲ್ಎಕ್ಸ್ಮತ್ತು ಕ್ವಿಕರ್ ಮೇಲೆ ದೆಹಲಿ ಹೈಕೋರ್ಟ್ನಿರ್ಬಂಧ ವಿಧಿಸಿದೆ. ರಿಲಯನ್ಸ್ಸಂಸ್ಥೆಯ ಬಗ್ಗೆ ಸುಳ್ಳು ಪ್ರಚಾರ ಮಾಡಿ ಜಾಹೀರಾತು ಹಾಕುವ ಮೂಲಕ ಕಂಪನಿಯ ಘನತೆಗೆ ಚ್ಯುತಿ ತಂದಿರುವುದರಿಂದ ಓಎಲ್ಎಕ್ಸ್ಮತ್ತು ಕ್ವಿಕರ್ಗೆ ರಿಲಯನ್ಸ್ಮತ್ತು ಜಿಯೋ ಕುರಿತ ಜಾಹೀರಾತು ಹಾಕದಂತೆ ನಿರ್ಬಂಧ ಹೇರಲಾಗಿದೆ.

ಈ ಬಗ್ಗೆ ಹೈಕೋರ್ಟ್​ ಗುರುವಾರ ಆದೇಶ ಹೊರಡಿಸಿದೆ. ರಿಲಯನ್ಸ್​ ಜಿಯೋ ಇನ್ಫೋಕಾಂ ಲಿಮಿಟೆಡ್ ಮತ್ತು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ಯಾವುದೇ ಜಾಹೀರಾತುಗಳನ್ನು ನೀಡಿಲ್ಲ ಎಂದು ಹೇಳಿದೆ. ಈ ರೀತಿ ಸುಳ್ಳು ಜಾಹೀರಾತು ನೀಡಿ, ಆ ಕಂಪನಿಯ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ರಿಲಯನ್ಸ್​ ಮತ್ತು ಜಿಯೋದ ಅನೇಕ ಗ್ರಾಹಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಈ ಜಾಹೀರಾತಿನ ಮೂಲಕ ತಪ್ಪು ಸಂದೇಶ ನೀಡಲಾಗಿದೆ. ಇದರಿಂದ ಆ ಸಂಸ್ಥೆಯ ಪ್ರತಿಷ್ಟೆಗೆ ಧಕ್ಕೆಯಾಗಿದೆ ಎಂದು ಹೈಕೋರ್ಟ್​ ಹೇಳಿದೆ.

ಓಎಲ್​ಎಕ್ಸ್​ ಮತ್ತು ಕ್ವಿಕರ್​ನ ವೆಬ್​ ಪೋರ್ಟಲ್​ನಲ್ಲಿ ಕ್ಲಾಸಿಫೈಡ್​ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ. ಈ ಪೋರ್ಟಲ್​ಗಳಲ್ಲಿ ಯಾವ ಗ್ರಾಹಕರು ಬೇಕಾದರೂ ಜಾಹೀರಾತು ಪ್ರಕಟಿಸಬಹುದು. ಈ ಕಾಲಂನಲ್ಲಿ ಜಿಯೋ ಜಾಬ್ಸ್​, ರಿಲಯನ್ಸ್​ ಟ್ರೆಂಡ್ಸ್​ ಜಾಬ್ಸ್​ ಎಂಬ ಶೀರ್ಷಿಕೆಯಡಿ ನಕಲಿ ಜಾಹೀರಾತು ಪ್ರಕಟಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿದೆ ಎಂದು ಜಾಹೀರಾತು ನೀಡುವ ಮೂಲಕ ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಹಣ ದೋಚಲು ಕ್ವಿಕರ್ ಹಾಗೂ ಓಎಲ್​ಎಕ್ಸ್​ ಮುಂದಾಗಿರುವ ಸಾಧ್ಯತೆಯಿದೆ.

ಈ ಬಗ್ಗೆ ಓಎಲ್​ಎಕ್ಸ್​ ಕೂಡ ಹೈಕೋರ್ಟ್​ಗೆ ದಾಖಲೆಗಳನ್ನು ಸಲ್ಲಿಸಿದೆ. ಓಎಲ್​ಎಕ್ಸ್​ ವೆಬ್​ ಪೋರ್ಟಲ್​ನಲ್ಲಿದ್ದ ಕೆಲವು ಯೂಆರ್​ಎಲ್​ಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಒಂದು ಯೂಆರ್​ಎಲ್​ ಡಿಲೀಟ್ ಮಾಡಲು ಸಾಧ್ಯವಾಗಿಲ್ಲ. ಅದನ್ನು ಕೂಡ ಡಿಲೀಟ್ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಜಾಹೀರಾತು ಹಾಕುವವರ ತಪ್ಪಿನಿಂದಾಗಿ ಈ ಅಚಾತುರ್ಯ ನಡೆದಿದೆ ಎಂದು ಕೂಡ ಓಎಲ್​ಎಕ್ಸ್​ ಕ್ಷಮಾಪಣೆ ಕೋರಿದೆ.

ಈ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯವರೆಗೂ ಕ್ವಿಕರ್​ನ ಗ್ರಾಹಕರು, ಏಜೆಂಟ್​ಗಳು, ಸರ್ವಂಟ್​ಗಳು ಯಾರೂ ವೆಬ್​ ಪೋರ್ಟಲ್​ನಲ್ಲಿ ಜಿಯೋ ಅಥವಾ ರಿಲಯನ್ಸ್​ ಹೆಸರು, ಲೋಗೋಗಳನ್ನು ಬಳಸುವಂತಿಲ್ಲ ಎಂದು ನಿರ್ಬಂಧ ಹೇರಿದೆ. ಹಾಗೇ, ಕ್ವಿಕರ್ ಮತ್ತು ಓಎಲ್​ಎಕ್ಸ್​ ಇಂಡಿಯಾಗೂ ಹೈಕೋರ್ಟ್​ ಸಮನ್ಸ್​ ಜಾರಿಗೊಳಿಸಿದೆ. ಹಾಗೇ, ಸೆಪ್ಟೆಂಬರ್​ 21ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಅಲ್ಲದೆ, ಓಎಲ್​ಎಕ್ಸ್​ ಮತ್ತು ಕ್ವಿಕರ್​ ಸಂಸ್ಥೆಗಳು ತಮ್ಮ ನಿರ್ಲಕ್ಷ್ಯದಿಂದ ನಡೆದ ಈ ಘಟನೆಯ ಬಗ್ಗೆ ಲಿಖಿತವಾಗಿ ತಪ್ಪೊಪ್ಪಿಗೆ ಬರೆದುಕೊಡಬೇಕು. ಹಾಗೇ, ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇನ್ನುಮುಂದೆ ಯಾವುದೇ ಕಂಪನಿಗಳ ಹೆಸರಿನಲ್ಲಿ ಈ ರೀತಿಯ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸಿ, ಜನರನ್ನು ತಪ್ಪುದಾರಿಗೆ ಎಳೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ.

Find Out More:

Related Articles: